ಊಟ ಮಾಡಿ ಮಲಗಿದ್ದ ಯುವತಿಯ ಮೃತದೇಹ ಬಾವಿಯಲ್ಲಿ ಪತ್ತೆ
ಕಾಸರಗೋಡು: ರಾತ್ರಿ ಊಟ ಮಾಡಿ ಮಲಗಿದ್ದ ಯುವತಿಯ ಮೃತದೇಹವನ್ನು ಬಾವಿಯಲ್ಲಿ ಪತ್ತೆಹಚ್ಚಲಾಗಿದೆ. ಮುಳ್ಳೇರಿಯ ನಿವಾಸಿ ಸುಬ್ರಾಯ ಎಂಬವರ ಪುತ್ರಿ ಹಾಗೂ ಪಿಲಿಕೋಡ್ ವರಕ್ಕೋಟು ವಯಲ್ ನಿವಾಸಿ ಎ.ವಿ. ವಿನೋದ್ರ ಪತ್ನಿ ಕೆ. ಸುನೀತಾ (38)ರ ಮೃತದೇಹ ನಿನ್ನೆ ಬೆಳಿಗ್ಗೆ ಬಾವಿಯಲ್ಲಿ ಪತ್ತೆಯಾಗಿದೆ. ಆದಿತ್ಯವಾರ ರಾತ್ರಿ ಊಟಮಾಡಿ ಮಲಗಿದ್ದವರು ಸಾಮಾನ್ಯವಾಗಿ ಮುಂಜಾನೆ 5 ಗಂಟೆಗೆ ಏಳುತ್ತಿದ್ದ ಇವರು ನಾಪತ್ತೆಯಾದ ಹಿನ್ನೆಲೆಯಲ್ಲಿ ಹಡುಕಾಡುತ್ತಿದ್ದಾಗ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ. ಚಂದೇರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ತೃಕರಿಪುರದಿಂದ ತಲುಪಿದ ಅಗ್ನಿಶಾಮಕದಳ ಮೃತದೇಹವನ್ನು ಮೇಲೆತ್ತಿದೆ. ಬಳಿಕ ಕಣ್ಣೂರು ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮನೆಯವರಿಗೆ ಮೃತ ದೇಹವನ್ನು ಬಿಟ್ಟುಕೊಡಲಾಗಿದೆ.
ಮೃತ ಯುವತಿ ತಂದೆ, ಪತಿ, ತಾಯಿ ಕುಸುಮ (ಸೂರಂಬೈಲು ನಿವಾಸಿ), ಸಹೋದರಿಯರಾದ ರಾಜೇಶ್ವರಿ, ಅನಿತ (ಮುಳ್ಳೇರಿಯ) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.