ಉಪ್ಪಳ: 2.9 ಗ್ರಾಂ ಎಂಡಿಎಂಎ ಸಹಿತ ಇಬ್ಬರನ್ನು ಮಂಜೇಶ್ವರ ಎಸ್ಐ ನಿಖಿಲ್ ಸೆರೆ ಹಿಡಿದಿದ್ದಾರೆ. ಕಲ್ಲಿಕೋಟೆ ನಿವಾಸಿಗಳಾದ ತಹಶಿಲ್ (32), ಸವಾದ್ (25)ಎಂಬಿವರನ್ನು ನಿನ್ನೆ ಹೊಸಂಗಡಿಯಿಂದ ಸೆರೆ ಹಿಡಿಯಲಾಗಿದೆ. ಗಸ್ತು ನಡೆಸುತ್ತಿದ್ದ ಪೊಲೀಸ್ ತಂಡ ಶಂಕೆ ತೋರಿ ತಪಾಸಣೆಗೈದಾಗ ಇವರ ವಶದಲ್ಲಿ 2.9 ಗ್ರಾಂ ಎಂಡಿಎಂಎ ಪೊಲೀಸರು ಪತ್ತೆಹಚ್ಚಿ ಕೇಸು ದಾಖಲಿಸಲಾಗಿದೆ.