ಎಂಡಿಎಂಎ ವಶ : ಇಬ್ಬರ ವಿರುದ್ಧ ಕೇಸು

ಕಾಸರಗೋಡು: ವಿದ್ಯಾನಗರ ಪೊಲೀಸ್ ಠಾಣೆಯ ಎಸ್‌ಐ ಅಬ್ಬಾಸ್ ಪಿ.ಕೆ.ಯವರ ನೇತೃತ್ವದ ಪೊಲೀಸರ ತಂಡ ಮುಟ್ಟತ್ತೋಡಿ ಪನ್ನಿಪ್ಪಾರೆಯಲ್ಲಿ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಮಾದಕವಸ್ತು ವಾದ 0.18 ಗ್ರಾಂ ಎಂಡಿಎಂಎ ಪತ್ತೆಹಚ್ಚಿ ವಶಪಡಿಸಿ ಕೊಂಡಿದೆ.

ಇದಕ್ಕೆ ಸಂಬಂಧಿಸಿ ಪನ್ನಿಪಾರೆಯ ಹಾಶಿಂ ಎನ್. ಎಂ.(54) ಮತ್ತು ಉಳಿಯತ್ತಡ್ಕ ಪಳ್ಳಂರಸ್ತೆ ಟರ್ಫ್‌ನ ಎದುರುಗಡೆ ನಿವಾಸಿ ಮೊಹಮ್ಮದ್ ಇಬ್ರಾಹಿಂ ಫಿರೋಜ್ (47) ಎಂಬಿಬ್ಬರ ವಿರುದ್ಧ ಕೇಸು ದಾಖಲಿಸಿ ಅವರಿಗೆ ನೋಟೀಸು ಜ್ಯಾರಿಗೊಳಿಸಿ ದ್ದಾರೆ. ಈ ಆರೋಪಿಗಳಲ್ಲೋರ್ವನಾದ ಹಾಶಿಂನ ಮನೆಯಿಂದ ಈ ಮಾಲು ಪತ್ತೆಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page