ಎಂಡಿಎಂಎ ವಶ :ಬೈಕ್ ಸಹಿತ ಓರ್ವ ಸೆರೆ

ಕಾಸರಗೋಡು: ಚೆರ್ಕಳ ಐದನೇ ಮೈಲುಗಲ್ಲು ಬಳಿ ವಿದ್ಯಾನಗರ ಪೊಲೀಸರು ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಮಾರಕ ಮಾದಕ ದ್ರವ್ಯವಾದ 3.75 ಗ್ರಾಂ ಎಂಡಿಎಂಎ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.

ಇದಕ್ಕೆ ಸಂಬಂಧಿಸಿ ಮೂಲತಃ ಕಾಸರಗೋಡು ತುರ್ತಿ ನಿವಾಸಿ ಹಾಗೂ ಈಗ ಮುಟ್ಟತ್ತೋಡಿ ತೈವಳಪ್ಪಿನಲ್ಲಿ ವಾಸಿಸುತ್ತಿರುವ ಅಬೂಬಕರ್ ಸಿದ್ದೀಕ್ (27) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಈತ ಚಲಾಯಿಸು ತ್ತಿದ್ದ ಬೈಕನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ವಿದ್ಯಾನಗರ ಎಸ್‌ಐ ವಿ.ವಿ. ಅಜೀಶ್‌ರ ನೇತೃತ್ವದ ಪೊಲೀಸರ ತಂಡ ಈ ಕಾರ್ಯಾಚರಣೆ ನಡೆಸಿದೆ.

RELATED NEWS

You cannot copy contents of this page