ಎಂಡೋಸಲ್ಫಾನ್ ಸಂತ್ರಸ್ತರಿಗೆ ಮನೆ: ವರದಿ ನೀಡದ ಜಿಲ್ಲಾಧಿಕಾರಿಗೆ ನ್ಯಾಯಾಲಯದಿಂದ ವಿಮರ್ಶೆ

ಕೊಚ್ಚಿ: ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ನಿರ್ಮಿಸಿದ ಮನೆಗಳು ಅಪಾಯಕಾರಿ ಸ್ಥಿತಿಯಲ್ಲಿವೆಯೆಂಬ ಅರ್ಜಿಯನ್ನು ಪರಿಗಣಿಸಿದ ಹೈಕೋರ್ಟ್ ಈ ವಿಷಯದಲ್ಲಿ ಕಾಸರಗೋಡು ಜಿಲ್ಲಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದೆ.

ಎಂಡೋಸಲ್ಫಾನ್ ಸಂತ್ರಸ್ತರಿಗೆ ಶ್ರೀ ಸತ್ಯಸಾಯಿ ಆರ್ಫನೇಜ್ ಟ್ರಸ್ಟ್ ನಿರ್ಮಿಸಿ ನೀಡಿದ ಮನೆ ಗಳನ್ನು ಯಥಾ ಸಮಯ ಹಸ್ತಾಂತರಿಸದಿರುವುದರಿಂದ ಮನೆಗಳು ಅಪಾಯಕಾರಿ ಸ್ಥಿತಿಯ ಲ್ಲಿವೆ ಯೆಂದು ತಿಳಿಸಿ ಸತ್ಯಸಾಯಿ ಆರ್ಫನೇಜ್ ಟ್ರಸ್ಟ್  ಅರ್ಜಿ ಸಲ್ಲಿಸಿತ್ತು. ಇದರಂತೆ ಸ್ಥಳಕ್ಕೆ ಭೇಟಿ ನೀಡಿ ಜಿಲ್ಲಾಧಿಕಾರಿ ವರದಿ ಸಲ್ಲಿಸುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಆದರೆ ಜಿಲ್ಲಾಧಿಕಾರಿ ಯಿಂದ ಯಾವುದೇ ವರದಿ ಲಭಿಸಿ ಲ್ಲವೆಂದು ಸರಕಾರದ ನ್ಯಾಯವಾದಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಜಿಲ್ಲಾಧಿಕಾರಿಯನ್ನು ತೀವ್ರವಾಗಿ ವಿಮರ್ಶಿಸಿದೆ. ಅಲ್ಲದೆ  ಜಿಲ್ಲಾಧಿಕಾರಿ ೨೫ರಂದು ಅನ್‌ಲೈನ್ ಮೂಲಕ ನ್ಯಾಯಾ ಲಯದಲ್ಲಿ ಹಾಜರಾಗಬೇ ಕೆಂದೂ ನಿರ್ದೇಶಿಸಲಾಗಿದೆ.

ಎಂಡೋಸಲ್ಫಾನ್ ಸಂತ್ರಸ್ತರು ಯಾವುದೇ ಸಹಾಯದ ನಿರೀಕ್ಷೆಯಿಲ್ಲದೆ ಜೀವಿಸುತ್ತಿದ್ದಾಗ ಜಿಲ್ಲಾಧಿಕಾರಿ ವಿಷಯದ ಗಂಭೀರತೆ ಕುರಿತು ತಿಳಿದುಕೊಳ್ಳಬೇಕಾಗಿತ್ತು. ಜಿಲ್ಲಾಧಿಕಾರಿ ಭಾಗದಿಂದ ಯಾವು ದೇ ಸ್ಪಷ್ಟೀಕರಣವಿಲ್ಲವೆಂಬುವುದು ‘ದುರಂತ’ವೇ ಸರಿಯೆಂದು ಜಸ್ಟೀಸ್                ದೇವನ್ ರಾಮಚಂದ್ರನ್ ತಿಳಿಸಿದ್ದಾರೆ. ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ೮೧ ಮನೆಗಳನ್ನು ಶ್ರೀ ಸತ್ಯಸಾಯಿ ಆರ್ಫನೇಜ್ ಟ್ರಸ್ಟ್ ನಿರ್ಮಿಸಿತ್ತು. ಇವುಗಳನ್ನು ಯಥಾ ಸಮಯ ಹಸ್ತಾಂತರಿಸದಿರುವುದರಿಂದ ಅವು ಜೀರ್ಣಾವಸ್ಥೆಯಲ್ಲಿದೆ. ಅವುಗಳನ್ನು ಪುನರ್ ನಿರ್ಮಿಸಲು ೨೪ ಲಕ್ಷ ರೂಪಾಯಿ ಬೇಕಾಗಿದೆ ಯೆಂದು ಅರ್ಜಿದಾರರು ಹೈಕೋರ್ಟ್‌ನಲ್ಲಿ ತಿಳಿಸಿದ್ದರು.

RELATED NEWS

You cannot copy contents of this page