ಎಂಡೋಸಲ್ಫಾನ್ ಸಂತ್ರಸ್ತೆಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ತೆಯಾದ ಯುವತಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಪನತ್ತಡಿ ಚಾಮುಂಡಿಕುನ್ನ್ ತುಂಬೋಟಿ ನಿವಾಸಿ ಎಂಕಪ್ಪು ನಾಯ್ಕ್‌ರ ಪುತ್ರಿ ಇ. ಸೌಮ್ಯ (32)ರ ಮೃತದೇಹ ಪತ್ತೆಯಾಗಿದೆ. ಸ್ನಾತಕೋತ್ತರ ಪದವಿ ಪಡೆದವರಾಗಿದ್ದಾರೆ ಸೌಮ್ಯ. ಮೃತಳು ತಂದೆ, ತಾಯಿ ಸುಂದರಿ, ಸಹೋದರ ಚಂದ್ರಶೇಖರನ್, ಸಹೋದರಿ ರಮ್ಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.