ಎಂಡೋಸಲ್ಫಾನ್ ಸಂತ್ರಸ್ತ ನಿಧನ

ಪೆರ್ಲ: ಪಡ್ರೆ ಮಲೆತ್ತಡ್ಕ ನಿವಾಸಿ ಎಂಡೋಸಲ್ಫಾನ್ ಸಂತ್ರಸ್ತರಾಗಿದ್ದ ಲಿಂಗಪ್ಪ ಗೌಡ (58) ನಿನ್ನೆ ನಿಧನಹೊಂದಿದರು.  ಜನ್ಮತಃ ವಿಕಲ ಚೇತನರಾಗಿದ್ದ ಇವರು ಶಯ್ಯಾವಲಂಬಿಯಾಗಿದ್ದರು.  ಎಣ್ಮಕಜೆ ಪಂಚಾಯತ್‌ನ ಎಂಡೋಸಲ್ಫಾನ್ ಸಂತ್ರಸ್ತರ ಯಾದಿಯಲ್ಲಿ ಸೇರಿದ್ದರು. ಇವರ ಬಗ್ಗೆ ದೃಶ್ಯ, ಮುದ್ರಣ ಮಾಧ್ಯಮಗಳಲ್ಲಿ ಈ ಮೊದಲು ವರದಿ ಪ್ರಕಟವಾಗಿತ್ತು.

ಮೃತರು ತಂದೆ ಐತಪ್ಪ ಗೌಡ, ತಾಯಿ ಕಮಲ,  ಸಹೋದರಿ ಯರಾದ ಪುಷ್ಪಲತಾ, ಲೀಲಾವತಿ, ಲಲಿತ, ದೇವಕಿ, ಸಹೋದರರಾದ ರಾಮಣ್ಣ ಗೌಡ, ಪ್ರದೀಪ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page