ಎಂ.ಡಿ.ಎಂ.ಎ: ಯುವಕನಿಗೆ ಹಲ್ಲೆಗೈದ ಆರು ಮಂದಿ ವಿರುದ್ಧ ಕೇಸು ದಾಖಲು
ಉಪ್ಪಳ: ಎಂಡಿಎಂಎ ಸಾಗಾಟ ಪ್ರಕರಣದ ವಾರಂಟ್ ಆರೋಪಿ ಯನ್ನು ಕರ್ನಾಟಕ ಪೊಲೀಸರು ಬಂಧಿಸಿದ ದ್ವೇಷದಿಂದ ಮಾರಕಾಯುಧಗಳೊಂದಿಗೆ ತಲುಪಿದ ತಂಡ ಯುವಕನಿಗೆ ಹಲ್ಲೆಗೈದ ಸಂಬಂಧ ಆರು ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಉಪ್ಪಳ ಗೇಟ್ ಶಾಫಿ ನಗರ ಪರಿಸರ ನಿವಾಸಿಗಳಾದ ಸಿದ್ದಿಕ್, ಮುನೀರ್, ಆಶಿಫ್, ಬಾತಿಷ್ ಹಾಗೂ ಕಂಡರೆ ಗುರುತುಹಚ್ಚಬಹುದಾದ ಇಬ್ಬರ ವಿರುದ್ಧ ಕೇಸು ದಾಖಲಿಸಲಾಗಿದೆ. ಉಪ್ಪಳಗೇಟ್ ಶಾಫಿ ನಗರದ ಬಷೀರ್ ಅಬ್ಬಾಸ್ (೩೫)ರಿಗೆ ತಂಡ ಹಲ್ಲೆಗೈದಿತ್ತು. ಮೊನ್ನೆ ಸಂಜೆ ಮನೆ ಮುಂದೆ ನಿಂತಿದ್ದ ವೇಳೆ ಆಕ್ರಮಣ ನಡೆಸಲಾಗಿದೆ. ಕಾರು ಹಾಗೂ ಬೈಕ್ಗಳಲ್ಲಿ ತಲುಪಿದ ೨೫ರಷ್ಟು ಮಂದಿಯ ತಂಡ ಹಲ್ಲೆಗೈದಿರುವು ದಾಗಿ ಬಷೀರ್ ಅಬ್ಬಾಸ್ ಆರೋಪಿಸಿದ್ದರು. ಈ ಬಗ್ಗೆ ನೀಡಿದ ದೂರಿನಂತೆ ಆರು ಮಂದಿ ಆರೋಪಿಗಳ ವಿರುದ್ಧ ಕೇಸು ದಾಖಲಿಸಲಾಗಿದೆ. ಕೆಲವು ದಿನಗಳ ಹಿಂದೆ ಮಾದಕವಸ್ತು ಪ್ರಕರಣದ ಆರೋಪಿಯಾದ ಓರ್ವನನ್ನು ಕರ್ನಾಟಕ ಪೊಲೀಸರು ಬಂಧಿಸಿದ್ದರು. ಇದಕ್ಕೆ ಬಷೀರ್ ಅಬ್ಬಾಸ್ ಮಾಹಿತಿ ನೀಡಿದ್ದನೆಂದು ಆರೋಪಿಸಿ ಹಲ್ಲೆಗೈದಿರುವುದಾಗಿ ಹೇಳಲಾಗುತ್ತಿದೆ.