ಎಎಸ್ಐ ಕಾರಿನ ಅಡಿ ಭಾಗದಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಅಸಿಸ್ಟೆಂಟ್ ಎಂಟಿಒ ಆಗಿ ಸೇವೆ ಸಲ್ಲಿಸುತ್ತಿರುವ ಎಎಸ್ಐ ವಾಹನ ಅಪಘಾತದಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮೂಲತಃ ಇಡುಕ್ಕಿ ಪೊತ್ತವಿ ಕ್ಕಾಡ್ ಪೊಲೀಸ್ ವ್ಯಾಪ್ತಿಗೊಳಪಟ್ಟ ತಾಯ್ ಮಾಟಂ ಕಾಲನಿ ನಿವಾಸಿ ಸಜಿ ಮಾಥ್ಯೂ (೫೦) ಸಾವನ್ನಪ್ಪಿದ ಪೊಲೀಸ್ ಅಧಿಕಾರಿ.
ಇವರು ಮೆಡಿಕಲ್ ರಜೆ ಪಡೆದು ಊರಿಗೆ ಹೋಗಿದ್ದರು. ಅಲ್ಲಿ ತಮ್ಮ ಹುಟ್ಟೂರಾದ ತಾಯ್ ಕುಳ ಕಾಲನಿ ಯಲ್ಲಿ ತನ್ನ ಸ್ವಂತ ಕಾರಿನ ಅಡಿಭಾ ಗದಲ್ಲಿ ಇಂದು ಬೆಳಿಗ್ಗೆ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ. ಇದು ಅಪಘಾತದಿಂದ ಉಂಟಾದ ಸಾವು ಆಗಿದೆಯೇ ಅಥವಾ ಬೇರೆ ಯಾವು ದೇ ರೀತಿಯಲ್ಲಿ ಸಾವು ನಡೆದಿದೆಯೇ ಎಂಬುವುದು ಸ್ಪಷ್ಟಗೊಂಡಿದೆ.
ಮೃತದೇಹವನ್ನು ಕೋದಮಂಗಲಂ ಧರ್ಮಗಿರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕವಷ್ಟೇ ಸಾವಿನ ಕಾರಣ ತಿಳಿಯಲು ಸಾಧ್ಯವೆಂದು ಪೊಲೀಸರುತಿ ಳಿಸಿದ್ದಾರೆ.