ಎಡನಾಡು ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ವಿಶೇಷ ಚಿನ್ನಾಭರಣ ಸಾಲ ಯೋಜನೆಗೆ ಚಾಲನೆ

ಸೀತಾಂಗೋಳಿ:  ಎಡನಾಡು- ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್‌ನ ವಿಶೇಷ ಚಿನ್ನಾಭರಣ ಸಾಲ ಯೋಜನೆಗೆ ನಿನ್ನೆ ಚಾಲನೆ ನೀಡಲಾಗಿದೆ. ಸಹಾಯಕ ರಿಜಿಸ್ಟ್ರಾರ್ ರವೀಂದ್ರ ಉದ್ಘಾಟಿಸಿದರು. ಬ್ಯಾಂಕ್‌ನ ಅಧ್ಯಕ್ಷ ಶ್ಯಾಮರಾಜ ದೊಡ್ಡ ಮಾಣಿ ಅಧ್ಯಕ್ಷತೆ ವಹಿಸಿದರು. ಮಾಜಿ ಅಧ್ಯಕ್ಷ ಶಿವರಾಮ್ ಭಟ್ ಕಾರಿಂಜ ಹಳೆಮನೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸರ್ಕಲ್ ಕೋ-ಆಪ ರೇಟಿವ್ ಯೂನಿಯನ್ ನಿರ್ದೇಶಕರಾಗಿ ಆಯ್ಕೆಯಾದ ಬ್ಯಾಂಕ್‌ನ ನಿರ್ದೇಶಕ ಕೃಷ್ಣ ಪ್ರಸಾದ್‌ರನ್ನು ಗೌರವಿಸಲಾಯಿತು. ಮಾಜಿ ಅಧ್ಯಕ್ಷ ಜಯಂತ ಪಾಟಾಳಿ ಉಪಸ್ಥಿತರಿದ್ದರು. ಉಪಾಧ್ಯಕ್ಷೆ ಹರಿಣಿ ಜಿ.ಕೆ. ನಾಯರ್ ಸ್ವಾಗತಿಸಿ, ನಿರ್ದೇಶಕ ನಟೇಶ ಕುಮಾರ ವಂದಿಸಿದರು.

You cannot copy contents of this page