ಎಡರಂಗ ಅಭ್ಯರ್ಥಿಯ ಜಯಗೊಳಿಸಲು ಸಿಐಟಿಯು ಪೈವಳಿಕೆ ಪಂ. ಸಮಿತಿ ನಿರ್ಧಾರ
ಪೈವಳಿಕೆ: ಕಾಸರಗೋಡು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಎಡರಂಗದ ಅಭ್ಯರ್ಥಿ ಎಂ.ವಿ. ಬಾಲಕೃಷ್ಣ ಮಾಸ್ತರ್ರನ್ನು ಜಯಗೊಳಿಸಲು ಸಿಐಟಿಯು ಪೈವಳಿಕೆ ಪಂಚಾಯತ್ ಸಮಿತಿ ನಿರ್ಧರಿಸಿದೆ. ಈ ಬಗ್ಗೆ ಪೈವಳಿಕೆಯಲ್ಲಿ ನಡೆದ ಪಂಚಾಯತ್ ಮಟ್ಟದ ಸಮಾವೇಶದಲ್ಲಿ ಸಿಐಟಿಯು ಪಂ. ಸಮಿತಿ ಅಧ್ಯಕ್ಷೆ ಸರೋಜ ಅಧ್ಯಕ್ಷತೆ ವಹಿಸಿದರು. ಬೇಬಿ ಶೆಟ್ಟಿ ಉದ್ಘಾಟಿಸಿದರು. ಮಂಜೇಶ್ವರ ಏರಿಯಾ ಉಪಾಧ್ಯಕ್ಷ ಚಂದ್ರ ನಾಕ್ ಮಾತನಾಡಿದರು. ಸುಶೀಲ ಸ್ವಾಗತಿಸಿ, ಸತ್ಯವತಿ ವಂದಿಸಿದರು. ಬಾಬು ವಾದ್ಯಪಡ್ಪು, ರಾಜೇಶ್ ನೇತೃತ್ವ ನೀಡಿದರು. ನಾಳೆ ಸಂಜೆ ೩ ಗಂಟೆಗೆ ಪೈವಳಿಕೆಯಲ್ಲಿ ಎಡರಂಗ ಪಂಚಾಯತ್ ಸಮಾವೇಶ ನಡೆಯಲಿದೆ.