ಎಡ-ಬಲ ರಾಜಕೀಯ ಒಪ್ಪಂದದಿಂದ ಪೈವಳಿಕೆ ಆಡಳಿತ ನಿಷ್ಕ್ರಿಯ- ಬಿಜೆಪಿ

ಪೈವಳಿಕೆ: ಪಂಚಾಯತ್‌ನಲ್ಲಿ ಎಡ-ಬಲ ಒಪ್ಪಂದ ರಾಜಕೀಯದಿಂದಾಗಿ ಆಡಳಿತ ನಿಷ್ಕ್ರಿಯವಾಗಿದೆ ಎಂದು ಬಿಜೆಪಿ ದೂರಿದ್ದು, ಈ ಆಡಳಿತ ನಾಡಿಗೆ ಶಾಪವೆಂದು ಮಂಜೇಶ್ವರ ಮಂಡಲ ಬಿಜೆಪಿ ಅಧ್ಯಕ್ಷ ಆದರ್ಶ್ ಬಿ.ಎಂ. ಆರೋಪಿಸಿದ್ದಾರೆ. ಪೈವಳಿಕೆ ಪಂ. ಬಿಜೆಪಿ ವಾರ್ಡ್ ಸಭೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಯಾವುದೇ ಜನಪರ ಯೋಜನೆಗಳು ಜ್ಯಾರಿಯಾಗುತ್ತಿಲ್ಲ. ಅಧಿಕಾರಿಗಳ ಅಭಾವದಿಂದ ಯೋಜನೆಗಳು ಜನರಿಗೆ  ಲಭಿಸುತ್ತಿಲ್ಲ. ತ್ಯಾಜ್ಯ ವಿಲೇವಾರಿಯೂ ಸರಿಯಾಗಿ ನಡೆಯುತ್ತಿಲ್ಲವೆಂದು ಅವರು ದೂರಿದರು. ಜಿಲ್ಲಾ ಉಪಾಧ್ಯಕ್ಷ ಮಣಿಕಂಠ ರೈ, ಜಿಲ್ಲಾ ಕಾರ್ಯದರ್ಶಿ- ಲೋಕೇಶ್, ಸುಬ್ರಹ್ಮಣ್ಯ ಭಟ್, ಪ್ರಸಾದ್ ರೈ, ಚಂದ್ರಾವತಿ ಶೆಟ್ಟಿ, ಜಯಲಕ್ಷ್ಮಿ ಭಟ್, ಜಯಶಂಕರ ಮುನ್ನೂರು, ಕೀರ್ತಿ ಭಟ್, ಗಣೇಶ ಪ್ರಸಾದ್ ಚೇರಾಲ್, ಸದಾನಂದ, ವಾರ್ಡ್ ಮಟ್ಟದ ಮುಖಂಡರು ಉಪಸ್ಥಿತರಿದ್ದರು. ಸತ್ಯಶಂಕರ ಭಟ್ ಸ್ವಾಗತಿಸಿ, ವಂದಿಸಿದರು.

You cannot copy contents of this page