ಎನ್‌ಟಿಯು ಮಂಜೇಶ್ವರ ಉಪಜಿಲ್ಲಾ ವತಿಯಿಂದ ಗುರುವಂದನೆ

ಮಂಜೇಶ್ವರ: ಎನ್‌ಟಿಯು ಮಂಜೇಶ್ವರ ಉಪಸಮಿತಿ ವತಿಯಿಂದ  ಗುರು ಪೂರ್ಣಿಮೆ ದಿನದಂದು ವಿದ್ಯಾರ್ಥಿಗಳಿಗೆ ಮನೆಯಲ್ಲಿ ಉಚಿತವಾಗಿ ಕಲಿಸುತ್ತಿರುವ ರಾಮಚಂದ್ರ ಚೆರುಗೋಳಿ ಇವರಿಗೆ ಗುರುವಂದನಾ ಕಾರ್ಯಕ್ರಮ ಅವರ ಸ್ವ-ಗೃಹದಲ್ಲಿ ಜರಗಿತು. ಎನ್‌ಟಿಯು ರಾಜ್ಯ ಸಮಿತಿ ಸದಸ್ಯ ಅರವಿಂದಾಕ್ಷ ಭಂಡಾರಿ, ನಿವೃತ್ತ ಮುಖ್ಯೋಪಾಧ್ಯಾಯಿನಿ ಪದ್ಮಾವತಿ, ಎನ್‌ಟಿಯು ಉಪಜಿಲ್ಲಾಧ್ಯಕ್ಷೆ ಚಂದ್ರಿಕಾ ಶುಭ ಕೋರಿದರು. ಸತೀಶ್ ಶೆಟ್ಟಿ ಒಡ್ಡಂಬೆಟ್ಟು ಪ್ರಸ್ತಾಪಿಸಿದರು.  ಶಿಷ್ಯರಾದ ಅಬ್ದುಲ್ ಲತೀಫ್ ಮಂಗಳೂರು, ಶಿವಪ್ರಸಾದ್ ಚೆರುಗೋಳಿ, ಪ್ರೀತಿಕಾ ತಮ್ಮ ಅನುಭವಗಳನ್ನು ಹಂಚಿಕೊಂಡರು. ಎನ್‌ಟಿಯು ಮಂಜೇಶ್ವರ ಉಪಜಿಲ್ಲಾ ಸಮಿತಿ ಸದಸ್ಯ ಕೃಷ್ಣಮೂರ್ತಿ, ಮೀರಾವತಿ, ದಯಾನಂದ, ಜಯಂತಿ, ಸ್ವಪ್ನ, ಶ್ವೇತ, ವಿದ್ಯಾರ್ಥಿಗಳು  ಉಪಸ್ಥಿತರಿದ್ದರು. ಉಪಜಿಲ್ಲಾ ಕೋಶಾಧಿಕಾರಿ ರಘುವೀರ್ ರಾವ್ ವಂದಿಸಿದರು.

You cannot copy contents of this page