ಎನ್‌ಡಿಎ ಉಮೇದ್ವಾರೆಯ ಚುನಾವಣಾ ಪ್ರಚಾರ ಸಭೆಗೆ ಅಡ್ಡಿ- ಪ್ರಕರಣ ದಾಖಲು

ಕಾಸರಗೋಡು: ತೃಕ್ಕರಿಪುರದಲ್ಲಿ ಎನ್‌ಡಿಎ ಉಮೇದ್ವಾರೆ ಎಂ.ಎಲ್. ಅಶ್ವಿನಿಯವರ ಚುನಾವಣಾ ಪ್ರಚಾರ ಸಭೆಗೆ ಅಡ್ಡಿ ಉಂಟುಮಾಡಿದ ಬಗ್ಗೆ ಅವರು ನೀಡಿದ ದೂರಿನಂತೆ ಚಂದೇರಾ ಪೊಲೀಸರು ಪ್ರಕರಣ ದಾಖಲಿ ಸಿಕೊಂಡಿದ್ದಾರೆ.
ಇದರAತೆ 1961ರ ಕೇರಳ ಪ್ರಿವೆಶ್ಶನ್ ಆಫ್ ಡಿಸ್ಟರ್ಬೆನ್ಸ್ ಆಫ್ ಪಬ್ಲಿಕ್ ಮೀಟಿಂಗ್ ಸಾರ್ವಜನಿಕ ಸಭೆ ಅಲ್ಲೋಲ ಕಲ್ಲೋಲಗೊಳಿಸುವಿಕೆ ತಡೆ ಕಾನೂನು ಪ್ರಕಾರ ಹಾಗೂ 1951ರ ಮತ್ತು 1988ರ ಜನಪ್ರಾತಿನಿಧ್ಯ ಕಾನೂನಿನ ಸೆಕ್ಷನ್ 127ರ ಪ್ರಕಾರ ಚಂದೇರಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾತ್ರವಲ್ಲ ಆ ಬಗ್ಗೆ ತನಿಖೆಯನ್ನು ಆರಂಭಿಸಿದ್ದಾರೆ.
ನ್ಯಾಯಯುತವಾದ ಹಾಗೂ ಪಾರದರ್ಶಕ ರೀತಿಯ ಚುನಾವಣೆ ಯನ್ನು ಖಾತರಿಪಡಿಸುವಿಕೆಯಲ್ಲಿ ಒಂದು ಪ್ರಧಾನ ವಿಷಯವಾದ ಚುನಾವಣಾ ಪ್ರಕಾರ ಸಭೆಯನ್ನು ಅಲ್ಲೋಲಕಲ್ಲೋಲಗೊಳಿಸುವ ಆತಂಕ ಗಳನ್ನು ದೂರಿನಲ್ಲಿ ಅಶ್ವಿನಿಯವರು ಉಲ್ಲೇಖಿಸಿದ್ದರು. ಮಾತ್ರವಲ್ಲ ಈ ಬಗ್ಗೆ ಶೀಘ್ರ ಸರಿಯಾದ ಹಾಗೂ ನಿಷ್ಪಕ್ಷ ರೀತಿಯ ತನಿಖೆ ನಡೆಸಬೇಕೆಂದೂ ದೂರಿನಲ್ಲಿ ಆಗ್ರಹಪಡಲಾಗಿತ್ತು.

RELATED NEWS

You cannot copy contents of this page