ಎಸ್ಎಸ್ಎಫ್ನಿಂದ ಮಹಬ್ ಕಾನ್ಫರೆನ್ಸ್
ಮಂಜೇಶ್ವರ: ಎಸ್ಎಸ್ಎಫ್ ಕೇರಳ ಮಂಜೇಶ್ವರದಲ್ಲಿ ನಡೆಸಿದ ಮಹಬ್ ಕಾನ್ಫರೆನ್ಸ್ನಲ್ಲಿ ಸಮಸ್ತ ಕೇರಳ ಜಂಇಯತ್ತುಲ್ ಉಲಾಮ ಕಾರ್ಯ ದರ್ಶಿ ಪೇರೋಡ್ ಅಬ್ದುಲ್ ರಹಿ ಮಾನ್ ಸಖಾಫಿ ಪ್ರಧಾನ ಭಾಷಣ ಮಾಡಿದರು. ಕಾಂತಾಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಆನ್ ಲೈನ್ ಮೂಲಕ ಉದ್ಘಾಟಿಸಿ ದರು. ಎಸ್ಎಸ್ಎಫ್ ರಾಜ್ಯಾಧ್ಯಕ್ಷ ಫಿರ್ದೋಸ್ ಸುರೈಜಿ ಸಖಾಫಿ ಅಧ್ಯಕ್ಷತೆ ವಹಿಸಿದರು. ಅಹಮ್ಮದ್ ಜಲಾಲುದ್ದೀನ್, ಅಬ್ದುಲ್ ಸಲಾಂ ಮುಸ್ಲಿಯಾರ್, ಮುನಿರುಲ್ ಅಹ್ದಲ್ ವಿವಿಧ ವಿಷಯಗಳಲ್ಲಿ ಮಾತ ನಾಡಿ ದರು. ಹಲವರು ಭಾಗವಹಿಸಿದರು.