ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಇಂದು ಅಪರಾಹ್ನ ಪ್ರಕಟ
ಕಾಸರಗೋಡು: ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶವನ್ನು ಇಂದು ಅಪರಾಹ್ನ 3 ಗಂಟೆಗೆ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ಪ್ರಕಟಿಸುವರು.
ಇದಾದ ಬಳಿಕ ಪಿ.ಆರ್.ಡಿಯ ಲೆವ್ ಮೊಬೈಲ್ ಅಪ್ಲಿಕೇಷನ್, ಪರೀಕ್ಷಾ ಭವನದ ಔದ್ಯೋಗಿಕ ವೆಬ್ ಸೈಟ್‌ಗಳಲ್ಲಿ ಫಲಿತಾಂಶ ಪ್ರಕಟಗೊಳ್ಳಲಿದೆ. ಇದರ ಜೊತೆಗೆ ಬಿಎಚ್‌ಎಸ್‌ಎಲ್‌ಸಿ ಮತ್ತು ಟಿಎಚ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶಗಳನ್ನೂ ಪ್ರಕಟಿಸಲಾಗುವುದು.