ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭ

ಕಾಸರಗೋಡು: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇಂದು ಬೆಳಿಗ್ಗೆ ಆರಂಭಗೊಂ ಡಿದ್ದು ಮಾರ್ಚ್ ೨೫ರ ತನಕ ಮುಂದುವರಿಯಲಿದೆ.ಜಿಲ್ಲೆಯ ಎರಡು ಶಿಕ್ಷಣ ಜಿಲ್ಲೆಗಳಲ್ಲಾಗಿ ಒಟ್ಟು ೨೦,೬೬೭ ವಿದ್ಯಾರ್ಥಿಗಳು ಇಂದು ಪರೀಕ್ಷೆಗೆ ಬರೆಯುತ್ತಿದ್ದಾರೆ. ಒಟ್ಟು ೧೫೭ ಕೇಂದ್ರಗಳಲ್ಲಾಗಿ ಪರೀಕ್ಷೆ ನಡೆಯುತ್ತಿದೆ. ಕಾಸರಗೋಡು ಶಿಕ್ಷಣ ಜಿಲ್ಲೆಯಲ್ಲಿ ಒಟ್ಟು ೧೧,೫೨೯ ವಿದ್ಯಾರ್ಥಿಗಳು ಪರೀಕ್ಷೆಗೆ ಬರೆಯುತ್ತಿದ್ದು, ಇದರಲ್ಲಿ ೬೦೫೦ ಹುಡುಗರು ಮತ್ತು ೫೪೭೯ ಹುಡುಗಿಯರು ಒಳಗೊಂಡಿದ್ದಾರೆ.

ಹೊಸದುರ್ಗ ಶಿಕ್ಷಣ ಜಿಲ್ಲೆಯಲ್ಲಿ ೪೬೮೫ ಹುಡುಗರು ಮತ್ತು ೪೩೫೯ ಹುಡುಗಿಯರು ಸೇರಿದಂತೆ ಒಟ್ಟು ೯೦೪೪ ವಿದ್ಯಾರ್ಥಿಗಳು ಪರೀಕ್ಷೆಗೆ ಬರೆಯುತ್ತಿದ್ದಾರೆ.ಕಾಸರಗೋಡು ಶಿಕ್ಷಣ ಉಪಜಿಲ್ಲೆ ಯಲ್ಲಿ ಅತೀ ಹೆಚ್ಚು ಎಂಬಂತೆ ಸರಕಾರಿ ಶಾಲೆಗಳ ಪೈಕಿ  ಕುಂಬಳೆ ಸರಕಾರಿ ಎಚ್‌ಎಸ್‌ಎಸ್ ನಲ್ಲಿ ೬೦೧ ವಿದ್ಯಾರ್ಥಿ ಗಳು, ಎಯ್ಡೆಡ್ ವಿಭಾಗದಲ್ಲಿ  ನಾಯ ಮ್ಮಾರಮೂಲೆ ಟಿಎಎಚ್‌ಎಸ್‌ಎಸ್ ನಲ್ಲಿ ೮೦೬ ಮತ್ತು ಅನ್‌ಎಯ್ಡೆಡ್ ವಿಭಾಗದಲ್ಲಿ ಚಟ್ಟಂಚಾಲ್ ಎಂಐಸಿ ಶಾಲೆಯಲ್ಲಿ  ೪೫೮ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ.ಕಾಸರಗೋಡು ಶಿಕ್ಷಣ ಜಿಲ್ಲೆಯಲ್ಲಿ ಅತೀ ಕಡಿಮೆ ಎಂಬಂತೆ  ಸರಕಾರಿ ವಲಯದಲ್ಲಿ ಮೂಡಂಬೈಲು ಸರಕಾರಿ ಎಚ್‌ಎಸ್‌ಎಸ್‌ನಲ್ಲಿ ೨೬, ಎಯ್ಡೆಡ್ ವಿಭಾಗದಲ್ಲಿ ಎಡನೀರು ಸ್ವಾಮೀಜೀಸ್  ಎಚ್‌ಎಸ್‌ಎಸ್‌ನಲ್ಲಿ ೧೯ ಮತ್ತು ಅನ್‌ಎಯ್ಡೆಡ್ ವಿಭಾಗದಲ್ಲಿ ಮುಜುಂಗಾವು ಶ್ರೀ ಭಾರತೀ ಪೀಠದಲ್ಲಿ ಐದು ವಿದ್ಯಾರ್ಥಿಗಳು ಮಾತ್ರವೇ ಪರೀಕ್ಷೆಗೆ ಬರೆಯುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page