ಎಸ್‌ವೈಎಸ್‌ನಿಂದ ಕುಂಬಳೆಯಲ್ಲಿ ಪ್ರಯಾಣಿಕರಿಗೆ ಇಫ್ತಾರ್ ಖೈಮ
ಕುಂಬಳೆ: ದೀರ್ಘದೂರ ಪ್ರಯಾಣಿಕರಿಗೆ ಉಪಕಾರವಾಗುವ ರೀತಿಯಲ್ಲಿ ಕುಂಬಳೆಯಲ್ಲಿ ಎಸ್‌ವೈಎಸ್ ಇಫ್ತಾಕ್ ಖೈಮ ಆರಂಭಿಸಿದೆ. ಕುಂಬಳೆ ವಲಯ ಸಮಿತಿಯ ಆಶ್ರಯದಲ್ಲಿ ಕುಂಬಳೆ ಪೇಟೆಯಲ್ಲಿ ಈ ಕೇಂದ್ರ ಕಾರ್ಯಾಚರಿಸುತ್ತಿದೆ. ರಂಜಾನ್ ವ್ರತಾಚರಣೆಯ ದಿನಗಳಲ್ಲಿ ಉಪವಾಸ ಕೊನೆಗೊಳಿಸಲು ಅಗತ್ಯವಾದ ಸಾಮಗ್ರಿಗಳು ಅಡಕವಾಗಿರುವ ಇಫ್ತಾರ್ ಕಿಟ್‌ಗಳನ್ನು ಇಲ್ಲಿಂದ ವಿತರಿಸಲಾಗುವುದು. ಕುಂಬಳೆ ಪಂಚಾಯತ್ ಉಪಾಧ್ಯಕ್ಷ ನಾಸಿರ್ ಮೊಗ್ರಾಲ್ ಉದ್ಘಾಟಿಸಿದರು. ವಲಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಕುಂಞಿ ಉಳುವಾರು ಮಾತನಾಡಿದರು. ಕುಂಬಳೆ ಸರ್ಕಲ್ ಪ್ರಧಾನ ಕಾರ್ಯದರ್ಶಿ ರಿಫಾಯಿ ಸಖಾಫಿ ವಂದಿಸಿದರು. ಕುಂಬಳೆ ಸರ್ಕಲ್‌ನ ಹತ್ತು ಘಟಕ ಸಮಿತಿಗಳನ್ನು ಕೇಂದ್ರೀಕರಿಸಿ ಭಕ್ಷ್ಯವಸ್ತುಗಳನ್ನು ಸಂಗ್ರಹಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ಕೇರಳ ಮುಸ್ಲಿಂ ಜಮಾಅತ್ ಸರ್ಕಲ್ ಅಧ್ಯಕ್ಷ ಮುಹಮ್ಮದ್ ತಲಪಾಡಿ, ಎಸ್‌ವೈಎಸ್ ಪದಾಧಿಕಾರಿಗಳಾದ ನಸೀರ್ ಬಾಖವಿ, ಮೊಯ್ದೀನ್ ಪೇರಾಲ್, ಮೂಸ ಮುಳಿಯಡ್ಕ, ಖಲೀಲ್, ಮುಹಮ್ಮದ್, ಸಿದ್ದಿಕ್, ಸಿದ್ದಿಕ್ ಪೇರಾಲ್, ಅಲಿ, ಸಿರಾಜ್ ಸಖಾಫಿ ಮೊದಲಾದವರು ಭಾಗವಹಿಸಿದರು.