ಏಕಾಂಗಿಯಾಗಿ ವಾಸಿಸುತ್ತಿದ್ದ ಯುವಕ ನಾಪತ್ತೆ: ದೂರು

ಬದಿಯಡ್ಕ: ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ಯುವಕನೋರ್ವ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ನಾರಂಪಾಡಿ ನಿವಾಸಿ ಅರ್ಬನ್ ಡಿಸೋಜಾರ ಪುತ್ರ ರೋಶನ್ ಜೋನ್ ಡಿಸೋಜ (41) ನಾಪತ್ತೆಯಾದ ವ್ಯಕ್ತಿ. ಈ ಬಗ್ಗೆ ಇವರ ಸಹೋದರಿ ತೂಮಿನಾಡು ನಿವಾಸಿ ಸರಿತಾ ಡಿಸೋಜಾ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಕೂಲಿ ಕಾರ್ಮಿಕನಾದ ರೋಶನ್ ಡಿಸೋಜಾ ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರೆನ್ನಲಾಗಿದೆ. ಕೆಲವು ದಿನಗಳಿಂದ ಇವರು ಕಾಣದೇ ಇದ್ದುದರಿಂದ ನೆರೆಮನೆ ನಿವಾಸಿಗಳು ಈ ತಿಂಗಳ ೨೫ರಂದು ಸಹೋದರಿ ಸರಿತಾ ಡಿಸೋಜಾರಿಗೆ ಫೋನ್ ಕರೆ ಮಾಡಿ ವಿಷಯ ತಿಳಿಸಿದ್ದರು. ಇದರಂತೆ ಸಹೋದರಿ ಸಂಬಂಧಿಕರ ಮನೆಗೆ ಸಾಗಿ ವಿವಿಧೆಡೆ ಹುಡುಕಿದರೂ ರೋಶನ್ ಡಿಸೋಜಾ ಪತ್ತೆಯಾಗದ ಹಿನ್ನೆಲೆಯಲ್ಲಿ ನಿನ್ನೆ ಪೊಲೀಸರಿಗೆ ದೂರು ನೀಡಿದ್ದಾರೆ.

RELATED NEWS

You cannot copy contents of this page