ಬದಿಯಡ್ಕ: ಶ್ರೀ ಕ್ಷೇತ್ರ ಧರ್ಮಸ್ಥಳ ಮಾತ್ರವಲ್ಲ ನಾಡಿನ ಎಲ್ಲ ದೇವ ಸ್ಥಾನಗಳ ಸುತ್ತ ಮುತ್ತ ನಿರ್ಮಲ ವಾಗಿರಬೇಕು ಎನ್ನುವ ಆಶಯವು ಧರ್ಮಾದಿsಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ನೀತಿಂiÀÆಗಿದÀÄ್ದ, ಸಂಘಟನೆ ಮೂಲಕ ಪ್ರತಿ ಕುಟುಂಬದ ಅಭಿವೃದ್ಧಿ ಮಾತ್ರ ಸಾಲದು ಸಾಮು ದಾಯಿಕ ಪ್ರಗತಿಯಾಗಬೇಕು. ಹೀಗೆ ಶ್ರೀ ಕ್ಷೇತ್ರದ ಸಮಾಜಮುಖಿ ಆರ್ಥಿಕ ನೆರವು ಬಂದಾಗ ಅದು ಧ್ಯೇಯೋ ದ್ದೇಶಗಳ ಪ್ರಗತಿಗೆ ನೆರವಾಗುವುದನ್ನು ನಾವು ಕಾಣಬಹುದು ಎಂಬುದಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಂಜೇಶ್ವರ ತಾಲೂಕು ಯೋಜನಾದಿsಕಾರಿ ಶಶಿಕಲಾ ಸುವರ್ಣ ನುಡಿದರು. ಅವರು ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ಸಭಾ ವೇದಿಕೆಯಲ್ಲಿ ನುಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ನೀಡಲಾದ ಸಹಾಯಧನ ರೂ. ಮೂರು ಲಕ್ಷದ ಡ್ರಾಫ್ಟನ್ನು ಕ್ಷೇತ್ರ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವೈ.ಶಾಮ ಭಟ್ರಿಗೆ ಹಸ್ತಾಂತರಿಸಿ ಮಾತನಾಡಿದರು. ಬ್ರಹ್ಮಕಲಶೋತ್ಸವ ಸಮಿತಿಯ ವೈ.ಶಂಕರ ಭಟ್, ಖಜಾಂ_ ವೈ.ವಿ.ಸುಬ್ರಹ್ಮಣ್ಯ, ಹಿರಿಯರಾದ ಪತ್ತಡ್ಕ ಗಣಪತಿ ಭಟ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪೆರ್ಲ ವಲಯದ ಸಂಚಾಲಕಿ ಜಯಶ್ರೀ, ಈಳಂತೋಡಿ ಒಕ್ಕೂಟದ ಅಧ್ಯಕ್ಷ ಸಂತೋಷ್ ಕುಮಾರ್ ರೈ ಪುತ್ರಕಳ, ಸೇವಾ ಪ್ರತಿನಿದಿs ಲಾವಣ್ಯ ಪಡಿಕ್ಕಲ್ಲು ಉಪಸ್ಥಿತರಿದ್ದರು. ಶಶಿಪ್ರಭಾ ವರುಂಬುಡಿ ಪ್ರಾರ್ಥನೆ ಹಾಡಿದರು. ಸಮಿತಿಯ ಸಂಯೋಜಕ ಚಂದ್ರಶೇಖರ ಏತಡ್ಕ ನಿರೂಪಿಸಿ ವಂದಿಸಿದರು.
