ಐಎಸ್‌ಆರ್‌ಒ, ಜಿಎಸ್‌ಟಿ ಅಧಿಕಾರಿ ನೆಪದಲ್ಲಿ ವಂಚನೆ: ಯುವತಿ ವಿರುದ್ಧ ಕೇಸು

ಕಾಸರಗೋಡು:  ಐಎಸ್‌ಆರ್‌ಒ, ಜಿಎಸ್‌ಟಿ ಅಧಿಕಾರಿ ಎಂಬ ಹೆಸರಲ್ಲಿ ವಂಚನೆ ನಡೆಸಿ, ಇಬ್ಬರು ಪೊಲೀಸರು ಕೆಲಸ ಕಳೆದುಕೊಳ್ಳುವಂತೆ ಮಾಡಿದ ಯುವತಿ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಕೊಲ್ಲಿ ನಿವಾಸಿಯ ಪತ್ನಿಯಾದ 32ರ ಹರೆಯದ ಯುವತಿ ವಿರುದ್ಧ ಮೇಲ್ಪರಂಬ ಪೊಲೀಸರು ಕೇಸು ದಾಖಲಿಸಿದ್ದಾರೆ. ಸಾಲ ಪಡೆದುಕೊಂಡ ಒಂದು ಲಕ್ಷ ರೂ. ಹಾಗೂ ಚಿನ್ನದ ಸರವನ್ನು ಮರಳಿ ಕೇಳಿದಾಗ ತನ್ನನ್ನು ಬೆದರಿಸಿರುವುದಾಗಿ ಆರೋಪಿಸಿ ಓರ್ವ ಯುವಕ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿರುವುದು. ಈ ಕೇಸಿನ ಬಗ್ಗೆ ಹೆಚ್ಚಿನ ಮಾಹಿತಿ ಪೊಲೀಸರು ಬಹಿರಂಗಪಡಿಸಿಲ್ಲ.

ಇದೇ ವೇಳೆ ಆರೋಪಕ್ಕೆ ವಿಧೇಯಳಾದ ಯುವತಿ ವಿರುದ್ಧ ರಹಸ್ಯ ತನಿಖಾ ವಿಭಾಗ ತನಿಖೆ ಆರಂಭಿಸಿದೆ. ಐಎಸ್‌ಆರ್‌ಒ, ಜಿಎಸ್‌ಟಿ ಇಲಾಖೆ ಅಧಿಕಾರಿ ಎಂದು ತಿಳಿಸಿ ನಕಲಿ ಗುರುತು ಚೀಟಿ ಉಪಯೋಗಿಸಿದ ಪ್ರಕರಣದಲ್ಲಿ ಈಕೆಯ ವಿರುದ್ಧ ತನಿಖೆ ನಡೆಸಲಾಗುತ್ತಿದೆ. ಕಣ್ಣೂರು, ತೃಶೂರು ಎಂಬೆಡೆಗಳಲ್ಲಿ ಇಬ್ಬರು ಪೊಲೀಸರೊಂದಿಗೆ ಗೆಳೆತನ ಬೆಳೆಸಿ ಬಳಿಕ ಪೊಲೀಸರ ಅಮಾನತಿಗೆ ಕಾರಣವಾದ ದೂರು ನೀಡಿರುವುದಾಗಿಯೂ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

RELATED NEWS

You cannot copy contents of this page