ಐಕ್ಯರಂಗದ ಆಹೋರಾತ್ರಿ ಮುಷ್ಕರ ಎ.4ರಂದು
ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಬಜೆಟ್ ಪಾಲು ನೀಡದೆ ಫಂಡ್ ಕಡಿತಗೊಳಿಸಿದ ಎಡರಂಗ ಸರಕಾರದ ಪ್ರಜಾಪ್ರಭುತ್ವ ವಿರುದ್ಧ ಕ್ರಮವನ್ನು ಪ್ರತಿಭಟಿಸಿ ಎಪ್ರಿಲ್ ೪ರಂದು ಐಕ್ಯರಂಗ ರಾಜ್ಯವ್ಯಾಪಕವಾಗಿ ಸ್ಥಳೀಯಾಡಳಿತ ಸಂಸ್ಥೆಗಳ ಮುಂಭಾಗದಲ್ಲಿ ನಡೆಸುವ ಆಹೋರಾತ್ರಿ ಮುಷ್ಕರವನ್ನು ಯಶಸ್ವಿಗೊಳಿಸಲು ಕಾಸರಗೋಡು ನಗರಸಭಾ ಯುಡಿಎಫ್ ಲೈಸನ್ ಸಮಿತಿ ತೀರ್ಮಾನಿಸಿದೆ. ಅಧ್ಯಕ್ಷ ಕೆ.ಎಂ. ಬಶೀರ್ ಅಧ್ಯಕ್ಷತೆ ವಹಿಸಿದರು. ವಿಧಾನಸಭಾ ಮಂಡಲ ಸಂಚಾಲಕ ಕೆ. ಖಾಲಿದ್, ಜಿ. ನಾರಾಯಣನ್, ಹಮೀದ್, ಮನಾಫ್, ಕೆ.ಟಿ. ಸುಭಾಷ್ ಮಾತನಾಡಿದರು