ಐಲ ಕ್ಷೇತ್ರದಲ್ಲಿ ವಿಷು ಜಾತ್ರೆ 13ರಿಂದ
ಉಪ್ಪಳ: ಐಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವಿಷು ಜಾತ್ರೆ ಎಪ್ರಿಲ್ 13ರಿಂದ 18ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. 13ರಂದು ಪೂರ್ವಾಹ್ನ 10ರಿಂದ ಧ್ವಜಾರೋಹಣ, ಬಲಿ ಉತ್ಸವ, ಹರಿಶ್ಚಂದ್ರ ಆಚಾರ್ಯ ಬೇಕೂರು ಸೇವಾರ್ಥವಾಗಿ ನೀಡಿದ ನೂತನ ಪಲ್ಲಕ್ಕಿ ಕ್ಷೇತ್ರಕೆÀ್ಕ ಸಮರ್ಪಣೆ, ರಾತ್ರಿ 7.45ರಿಂದ ಬಲಿಉತ್ಸವ, 14ರಂದು 5.30ರಿಂದ ವಿಷುಕಣಿ ದರ್ಶನ, 7ರಿಂದ ಹೂವಿನ ಪೂಜೆ, ಬಲಿ ಉತ್ಸವ, ಗಣಹೋಮ, ನವಕ ಕಲಶ, ಭಜನೆ, 9.30ರಿಂದ ಪಂಚಾAಗ ಶ್ರವಣ, 10ರಿಂದ ಸಂಗೀತ ಕಾರ್ಯಕ್ರಮ, ರಾತ್ರಿ 7.45ರಿಂದ ಬಲಿ ಉತ್ಸವ, 15ರಂದು ಪೂರ್ವಾಹ್ನ 7ರಿಂದ ಹೂವಿನಪೂಜೆ, ಬಲಿ ಉತ್ಸವ, ಗಣಹೋಮ, ನವಕ ಕಲಶ, ರಾತ್ರಿ 7.45ರಿಂದ ಮಾಗಣೆ ಕೂಟ, ಬಲಿ ಉತ್ಸವ, ನಡುದೀಪೋತ್ಸವ, ರಾಜಾಂಗಣ ಪ್ರಸಾದ, 16ರಂದು ಪೂರ್ವಾಹ್ನ 7ರಿಂದ ಹೂವಿನಪೂಜೆ, ಬಲಿ ಉತ್ಸವ, ಗಣಹೋಮ, ನವಕ ಕಲಶ, ರಾತ್ರಿ 7.45ರಿಂದ ಬಲಿ ಉತ್ಸವ, ರಾಜಾಂಗಣ ಪ್ರಸಾದ, ಕೆರೆದೀ ಪೋತ್ಸವ, 10ರಿಂದ ಶ್ರೀ ಕ್ಷೇತ್ರದ ಮೈದಾನದಲ್ಲಿ ವಿರಾಟ್ ನೃತ್ಯ ಭಜನಾ ಸಂಭ್ರಮ, ಕಟ್ಟೆಪೂಜೆ, ಸಾರ್ವಜನಿಕ ಬೆಡಿ ಉತ್ಸವ, 12.30ರಿಂದ ಕವಾಟ ಬಂಧನ, 17ರಂದು ಪೂರ್ವಾಹ್ನ 7ರಿಂದ ಕವಾಟೋದ್ಘಾಟನೆ, ಅಭಿಷೇಕ, ಪೂಜೆ, 9.30ರಿಂದ ತುಲಾಭಾರ ಸೇವೆ, ಸಂಜೆ 4ರಿಂದ ಆರಾಟೋತ್ಸವ, ರಾಜಾಂಗಣ ಪ್ರಸಾದ, ಕುಬಣೂರು ಶ್ರೀ ಶಾಸ್ತಾವು ಕ್ಷೇತ್ರದ ಕೆರೆಯಲ್ಲಿ ಅವಭೃತ ಸ್ನಾನಕ್ಕೆ ತೆರಳುವುದು, ರಾತ್ರಿ 10ರಿಂದ ಧ್ವಜಾವರೋಹಣ, ನವಕ ಕಲಶ, 18ರಂದು ಸಂಜೆ 5ರಿಂದ ಶ್ರೀ ವ್ಯಾಘ್ರ ಚಾಮುಂಡಿ ದೈವದ ನೇಮೋತ್ಸವ ಜರಗ ಲಿದೆ. 17ರ ತನಕ ನಿತ್ಯ ಮಧ್ಯಾಹ್ನ 12 ರಿಂದ ಸಾಮೂಹಿಕ ಸರ್ವಮಂಗಲ ಮಾಂಗಲ್ಯೇ ಸ್ತುತಿ ಪಾರಾಯಣ, ಅನ್ನ ಸಂತರ್ಪಣೆ, ಸಂಜೆ 5ರಿಂದ ಭಜನಾ ಸಂಕೀರ್ತನೆ, 6.30ರಿಂದ ದೀಪಾರಾ ಧನೆ, ಭಜನಾ ಸಂಕೀರ್ತನೆ ಜರಗಲಿದೆ.