ಐಲ ಕ್ಷೇತ್ರ ಸೇವಾ ಸಮಿತಿ ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ

ಉಪ್ಪಳ: ಐಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಸೇವಾ ಸಮಿತಿಯ ಮಹಾಸಭೆ ಇತ್ತೀಚೆಗೆ ಜರಗಿತು. ಕ್ಷೇತ್ರದ ಆಡಳಿತ ಮೊಕ್ತೇಸರ ಕೋಡಿಬೈಲು ನಾರಾಯಣ ಹೆಗ್ಡೆ ಉದ್ಘಾಟಿಸಿದರು. ಮಜಲು ಶಂಕರ ನಾರಾಯಣ ಹೊಳ್ಳರು ಅಧ್ಯಕ್ಷತೆ ವಹಿಸಿದರು. ಗತವರ್ಷದ ವರದಿ ಹಾಗೂ ಲೆಕ್ಕಪತ್ರವನ್ನು ಪ್ರಧಾನ ಕಾರ್ಯದರ್ಶಿ ಮೋಹನದಾಸ್ ಐಲ ವಾಚಿಸಿದರು. ಬಳಿಕ ನೂತನ ಸಮಿತಿಯನ್ನು ರಚಿಸಲಾಯಿತು. ಸೇವಾ ಸಮಿತಿಯ ಗೌರವಾಧ್ಯಕ್ಷರಾಗಿ ಸಿ.ಎಸ್. ಕೃಷ್ಣಪ್ಪ ಐಲ, ಗೌರವ ಸಲಹೆಗಾರರಾಗಿ ಮಜಲು ಶಂಕರನಾರಾಯಣ ಹೊಳ್ಳ, ಅಧ್ಯಕ್ಷರಾಗಿ ಲಕ್ಷ್ಮಣ ಕುಂಬಳೆ, ಉಪಾಧ್ಯಕ್ಷರಾಗಿ ಸುಧೀಶ್‌ಚಂದ್ರ ಶೆಟ್ಟಿ ಹಾಗೂ ವಸಂತ ಕುಮಾರ ಮಯ್ಯ, ಪ್ರಧಾನ ಕಾರ್ಯದರ್ಶಿ ಯಾಗಿ ಮೋಹನದಾಸ್ ಐಲ,  ಜತೆ ಕಾರ್ಯದರ್ಶಿಗಳಾಗಿ ಸಂತೋಷ್ ಐಲ, ಭರತ್ ರೈ ಕೋಡಿಬೈಲು, ಕೋಶಾಧಿಕಾರಿಯಾಗಿ ಕೆ. ನಾರಾ ಯಣ ಹೆಗ್ಡೆ, ಲೆಕ್ಕಪರಿಶೋಧಕರಾಗಿ ಶಿವಾನಂದ ಮಯ್ಯ ಐಲ ಹಾಗೂ 28 ಜನರ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.

ಶ್ರೀ ಕ್ಷೇತ್ರದ ಉತ್ಸವಾಂಗ ಣವಾದ ಐಲ ಮೈದಾನದಲ್ಲಿ ತಾಲೂಕು ಕಚೇರಿ ನಿರ್ಮಿಸಲು ಸರಕಾರ ನಡೆಸಿರುವ ಪ್ರಯತ್ನ ವಿರುದ್ಧ ಸೂಕ್ತ ನಿರ್ಧಾರ ಕೈಗೊಳ್ಳಲು ಭಕ್ತರ ಸಭೆಯನ್ನು ಕ್ಷೇತ್ರದಲ್ಲಿ 21ರಂದು   ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ಮೊಕ್ತೇಸರರಾದ ಶಿವರಾಮ ಪಕಳ, ಡಾ| ಶ್ರೀರಾಜ್ ಹಾಗೂ ಕೃಷ್ಣ ಕುಮಾರ್ ಐಲ ಉಪಸ್ಥಿತರಿದ್ದರು. ಸೇವಾ ಸಮಿತಿಯ ಗೌರವಾಧ್ಯಕ್ಷ ಸಿ.ಎಸ್. ಕೃಷ್ಣಪ್ಪ, ಅರ್ಚಕ ಶಿವಾನಂದ ಮಯ್ಯ ಮಾತ ನಾಡಿದರು. ಮೋಹನದಾಸ್ ಐಲ ಸ್ವಾಗತಿಸಿ, ಅನಿಲ್ ಬತ್ತೇರಿ ವಂದಿಸಿದರು.

Leave a Reply

Your email address will not be published. Required fields are marked *

You cannot copy content of this page