ಐಲ ಬ್ರಹ್ಮಶ್ರೀ ಮೊಗೇರ ಮಹಾಕಾಳಿ ದೈವಸ್ಥಾನದಲ್ಲಿ ವಾರ್ಷಿಕ ನೇಮ ಎ.3ರಿಂದ
ಮಂಗಲ್ಪಾಡಿ: ಐಲ ಬ್ರಹ್ಮಶ್ರೀ ಮೊಗೇರ ಮಹಾಕಾಳಿ ದೈವಸ್ಥಾನ ಪುಳಿಕುತ್ತಿ ಇಲ್ಲಿ ಶ್ರೀ ದೈವಗಳ ವಾರ್ಷಿಕ ನೇಮೋತ್ಸವ ಎಪ್ರಿಲ್ 3ರಿಂದ 5ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. 3ರಂದು ಬೆಳಿಗ್ಗೆ 5.30ರಿಂದ ಗಣಹೋಮ, ಮಧ್ಯಾಹ್ನ 1.30ರಿಂದ ಭಂಡಾರ ಮನೆಯಲ್ಲಿ ಶ್ರೀ ಗುಳಿಗ ದೈವದ ಕೋಲ, ಸಂಜೆ 4ರಿಂದ ಶ್ರೀ ಕೊರತಿ ದೈವದ ಕೋಲ, ಸಂಜೆ 6ರಿಂದ ನವದುರ್ಗಾ ಕುಣಿತ ಭಜನಾ ಸಂಘ ಪುಳಿಕುತ್ತಿ ಇವರಿಂದ ಕುಣಿತ ಭಜನೆ, 6.45ರಿಂದ ಸ್ಥಳೀಯ ಪ್ರತಿಭೆಗಳಿಂದ ನೃತ್ಯ, ರಾತ್ರಿ 7ಕ್ಕೆ ಶ್ರೀ ದೈವಗಳ ಭಂಡಾರ ಆಗಮನ, 8ರಿಂದ ಸಭಾ ಕಾರ್ಯಕ್ರಮ, ಅನ್ನಸಂತರ್ಪಣೆ, 9.30ರಿಂದ ಶ್ರೀ ಕೊರಗ ತನಿಯ, ಅಣ್ಣಪ್ಪ ಪಂಜುರ್ಲಿ, ಕಲ್ಲುರ್ಟಿ ಮತ್ತು ಕೊರತಿ ದೈವಗಳ ನೇಮೋತ್ಸವ, 4ರಂದು ಸಂಜೆ 6.30ರಿಂದ ಯಕ್ಷಗಾನ ಬಯಲಾಟ, ರಾತ್ರಿ ಅನ್ನಸಂತರ್ಪಣೆ, 11ರಿಂದ ಶ್ರೀ ಮಹಾಕಾಳಿ ದೈವದ ನೇಮೋತ್ಸವ, 5ರಂದು ರಾತ್ರಿ 7ರಿಂದ ನೃತ್ಯ, 8ರಿಂದ ಸ್ವರಾಂಜಲಿ ಮೆಲೋ ಡಿಸ್ ಮಂಗಲ್ಪಾಡಿ ಇವರಿಂದ ಭಕ್ತಿ ಭಾವ ಸಂಗಮ, ಅನ್ನಸಂತರ್ಪಣೆ, 10.30ರಿಂದ ಐಲ ಬ್ರಹ್ಮಶ್ರೀ ಮೊಗೇರ ನೇಮೋತ್ಸವ, 12ರಿಂದ ಶ್ರೀ ತನ್ನಿಮಾನಿಗ ದೈವ ಭಂಡಾರ ಮನೆಯಿಂದ ಹೊರಟು ಉತ್ಸವಾಂ ಗಣಕ್ಕೆ ಪ್ರವೇಶ ಬಳಿಕ ಭಂಡಾರ ಇಳಿಯುವುದು ನಡೆಯಲಿದೆ.