ಒಂದೇ ವ್ಯಾಪಾರ ಸಂಸ್ಥೆಯಿಂದ ಐದು ಬಾರಿ ಕಳವು ನಡೆಸಿದ ಕುಖ್ಯಾತ ಕಳ್ಳ ಸೆರೆ
ಕಣ್ಣೂರು: ಪಯ್ಯನ್ನೂರಿನ ಸಂಸ್ಥೆಯೊಂದಕ್ಕೆ ಐದು ಬಾರಿ ಗೋಡೆ ಕೊರೆದು ನುಗ್ಗಿ ಕಳವು ನಡೆಸಿದ ಕುಖ್ಯಾತ ಕಳ್ಳನನ್ನು ಬಂಧಿಸಲಾಗಿದೆ. ತಮಿಳು ನಾಡಿನ ಕೊಯಂಬತ್ತೂರು ಚುಕ್ಕನ್ ಪಾಳಯಂ ಕೊಡಿಯಲ್ಲೂರಿನ ಜೋನ್ ಪೀಟರ್ ಯಾನೆ ಶಕ್ತಿವೇಲು (32) ಎಂಬಾತನನ್ನು ಪಯ್ಯನ್ನೂರು ಪೊಲೀ ಸರು ಬಂಧಿಸಿದ್ದಾರೆ. ಪಯ್ಯ ನ್ನೂರು ಕೇಳೋತ್ತ್ನ ಹೊಟೇಲೊಂದ ರಿಂದ ನಿನ್ನೆ ಮುಂಜಾನೆ 5800 ರೂ. ಕಳವು ನಡೆಸಿ ಪರಾರಿಯಾಗುತ್ತಿದ್ದ ವೇಳೆ ಈತ ಸೆರೆಗೀಡಾಗಿದ್ದಾನೆ. ಈತನನ್ನು ತನಿಖೆಗೊ ಳಪಡಿಸಿದಾಗ ಪಯ್ಯನ್ನೂರಿನ ಸ್ಕೈಪರ್ ಸೂಪರ್ ಮಾರ್ಕೆಟ್ಗೆ ಐದು ಬಾರಿ ಗೋಡೆ ಕೊರೆದು ಒಳನುಗ್ಗಿ ಕಳವು ನಡೆಸಿ ರುವುದು ತಾನೆಂದು ಆರೋಪಿ ಒಪ್ಪಿ ಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.