ಒಂಭತ್ತನೇ ತರಗತಿ ವಿದ್ಯಾರ್ಥಿನಿಗೆ ದೌರ್ಜನ್ಯ : ಪ್ಲಸ್‌ವನ್ ವಿದ್ಯಾರ್ಥಿ ಪೋಕ್ಸೋ ಪ್ರಕಾರ ಸೆರೆ

ಕಾಸರಗೋಡು: 9ನೇ ತರಗತಿ ವಿದ್ಯಾರ್ಥಿನಿಯನ್ನು ದೌರ್ಜನ್ಯಗೈದಿ ರುವುದಾಗಿ ನೀಡಿದ ದೂರಿನಂತೆ ಪ್ಲಸ್‌ವನ್ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದರು. ಪೋಕ್ಸೋ ಪ್ರಕಾರ ಈತನ ವಿರುದ್ಧ ಕೇಸು ದಾಖಲಿಸಲಾಗಿದೆ. ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ ಒಂದು ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿ ಸೆರೆಯಾದವನು. ಈ ವಿದ್ಯಾರ್ಥಿ ತಾನು ಕಲಿತಿರುವ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ ನಿಯನ್ನು ದೌರ್ಜನ್ಯಗೈದಿದ್ದಾನೆ. ಇವರಿಬ್ಬರು ಪ್ರೀತಿಸುತ್ತಿದ್ದರೆಂದು ಪೊಲೀಸ್ ತನಿಖೆಯಿಂದ ಸ್ಪಷ್ಟಗೊಂಡಿದೆ. ಬಳಿಕ ಪ್ಲಸ್‌ಟು ವಿದ್ಯಾರ್ಥಿ ಈ ಸಂಬಂಧದಿಂದ ಹಿಂಜರಿದಿರುವ ಹಿನ್ನೆಲೆಯಲ್ಲಿ ದೌರ್ಜನ್ಯ ದೂರು ನೀಡಿರುವುದಾಗಿ ಪೊಲೀಸರು ಸೂಚಿಸಿದ್ದಾರೆ. ವೈದ್ಯಕೀಯ ತಪಾಸಣೆಯಲ್ಲಿ ಬಾಲಕಿ ದೌರ್ಜನ್ಯಕ್ಕೆ ತುತ್ತಾಗಿರುವುದಾಗಿ ಸ್ಪಷ್ಟಗೊಂಡಿದೆಯೆಂಬ ಸೂಚನೆಯಿದೆ.

Leave a Reply

Your email address will not be published. Required fields are marked *

You cannot copy content of this page