ಕಂಗು ದೇಹದ ಮೇಲೆ ಬಿದ್ದು ಗಾಯಗೊಂಡ ಕಾರ್ಮಿಕ ಮೃತ್ಯು
ಕಾಸರಗೋಡು: ಮರ ಕಡಿಯುತ್ತಿದ್ದಾಗ ದೇಹದ ಮೇಲೆ ಅಡಿಕೆ ಮರ ತುಂಡಾಗಿ ಬಿದ್ದು ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟನು.
ಬೇಡಗಂ ಚೆಂಬಕ್ಕಾಡ್‌ನ ದಿ| ಕಣ್ಣನ್‌ರ ಪುತ್ರ ಕುಂಞಿರಾಮನ್ (46) ಇಂದು ಬೆಳಿಗ್ಗೆ ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟರು. ಒಂದು ವಾರ ಹಿಂದೆ ಕಲ್ಯೋಟ್‌ನಲ್ಲಿ ದುರ್ಘಟನೆ ಸಂಭವಿಸಿತ್ತು. ಮರ ಕಂಗಿನ ಮೇಲೆ ಬಿದ್ದಿದ್ದು, ಈ ವೇಳೆ ಕಂಗು ತುಂಡಾಗಿ ಕುಂಞಿರಾಮನ್‌ರ ದೇಹದ ಮೇಲೆ ಬಿದ್ದು ಅವರು ಗಂಭೀರ ಗಾಯಗೊಂಡಿದ್ದರು.
ಮೃತರು ಪತ್ನಿ ಉಷಾ, ಮಕ್ಕಳಾದ ಶ್ರೀಜಾ, ಶ್ರೀನಂದನ, ಶ್ರೀಹರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.