ಕಂಚಿಕಟ್ಟೆ ಸೇತುವೆ ಪುನರ್ ನಿರ್ಮಾಣ ಅನಿಶ್ಚಿತತೆಯಲ್ಲಿಶೀಘ್ರ ನಿರ್ಮಿಸಲು ದಲಿತ್ ಮುನ್ನೇಟ ಸಮಿತಿ ಮನವಿ

ಕುಂಬಳೆ: ಕಂಚಿಕಟ್ಟೆ-ಕೊಡ್ಯಮ್ಮೆ ಸೇತುವೆ ಮೂಲಕದ ವಾಹನ ಸಂಚಾರ ಪೂರ್ಣವಾಗಿ ನಿಷೇಧಿಸಿ ವರ್ಷ ವೊಂದು ಕಳೆದರೂ ಪುನರ್ ನಿರ್ಮಾಣ ಅನಿಶ್ಚಿತತೆಯಲ್ಲಿದೆ. ನಿರ್ಮಾಣ ವಿಳಂಬಗೊಂಡಿರು ವುದನ್ನು ಪ್ರತಿಭಟಿಸಿ ಜಿಲ್ಲಾ ಆದಿ ದಲಿತ್ ಮುನ್ನೇಟ ಸಮಿತಿ  ರಂಗಕ್ಕಿಳಿದಿದೆ. ೨೦೨೩ ಡಿಸೆಂಬರ್‌ನಲ್ಲಿ ಅಪಾಯಕ ರವಾದ ಸ್ಥಿತಿಯಲ್ಲಿದ್ದ ಸೇತುವೆಯನ್ನು ಜಿಲ್ಲಾಧಿಕಾರಿ ಕೆ. ಇಂಭಶೇಖರ್ ಮುಚ್ಚಲು ಆದೇಶಿಸಿ ದ್ದರು. ಆದರೂ ಈಗಲೂ ಕೂಡ ಪುನರ್ ನಿರ್ಮಾಣದ ವಿಷಯದಲ್ಲಿ ಅನಿಶ್ಚಿತ ತೆಯೇ ಮುಂದುವರಿಯು ತ್ತಿದೆ. ಕಂಚಿಕಟ್ಟೆ ಸೇತುವೆಯ ದುರವಸ್ಥೆ ಹಾಗೂ ಜೀರ್ಣತೆ ಬಗ್ಗೆ ಸ್ಥಳೀಯರು  ಸೂಚನೆ ನೀಡಲು ಆರಂಭಿಸಿ ಹಲವು ವರ್ಷ ಕಳೆದಿದೆ.  ಸೇತುವೆಯನ್ನು ನವೀಕರಿ ಸಬೇಕೆಂದು ಆಗ್ರಹಿಸಿ ಸ್ಥಳೀ ಯರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮುಷ್ಕರ ಹೂಡಿದ್ದರು. ಶಾಸಕ ಎಕೆಎಂ ಅಶ್ರಫ್ ಈ ವಿಷಯವನ್ನು ವಿಧಾನಸಭೆ ಯಲ್ಲೂ ಮಂಡಿಸಿ ಮಾತನಾಡಿದ್ದರು. ಇದರ ಆಧಾರದಲ್ಲಿ ಪಿಡಬ್ಲ್ಯುಡಿ-ನೀರಾವರಿ ಇಲಾಖೆ ಮಟ್ಟದ ಅಧಿ ಕಾರಿಗಳು ಸ್ಥಳ ಸಂದರ್ಶಿಸಿ ನಿಜ ಸ್ಥಿತಿ ತಿಳಿದುಕೊಂಡು ವರದಿ ನೀಡಿದ್ದರು. ಆದರೆ ಇದ್ಯಾವು ದರಿಂದಲೂ ಪುನರ್ ನಿರ್ಮಾಣಕ್ಕೆ ನಾಂದಿ ಹಾಡಲಾಗಲಿಲ್ಲ ವೆಂದು ಆದಿ ದಲಿತ್ ಮುನ್ನೇಟ ಸಮಿತಿ ಜಿಲ್ಲಾ ಧ್ಯಕ್ಷ ಇ.ಕೆ. ಚಂದ್ರಶೇಖರನ್ ಆರೋಪಿಸಿದ್ದಾರೆ. ಈ ಮೊದಲು ಸೇತುವೆ ಮೂಲಕ ನೂರಾರು ಸಣ್ಣ-ದೊಡ್ಡ ವಾಹನಗಳು, ಶಾಲಾ ವಾಹನ ಗಳು ಸಂಚರಿಸುತ್ತಿತ್ತು. ಶೋಚನೀಯ ಸ್ಥಿತಿಗೆ ತಲುಪಿದ ಬಳಿಕ  ಸೇತುವೆ ಮುಚ್ಚಲಾ ಯಿತಾ ದರೂ  ಬದಲಿ ಮಾರ್ಗವನ್ನು ಏರ್ಪಡಿಸಲಿಲ್ಲ.  ಆದುದರಿಂದ   ಈ ಪರಿಸರದ ಜನರು  ಕುಂಬಳೆ ಪೇಟೆಗೆ, ಶಾಲೆಗೆ ಸುಲಭದಲ್ಲಿ ತಲುಪಬೇಕಾದ  ರಸ್ತೆ ಮುಚ್ಚಿದಂತಾಗಿದೆ.

ಇದರಿಂದ ವಿದ್ಯಾರ್ಥಿಗಳು, ಸ್ಥಳೀಯರು ಅತ್ಯಂತ  ಸಂಕಷ್ಟ ಹೊಂದಿದ್ದು, ಸಮಯ ನಷ್ಟ ಹಾಗೂ ಆರ್ಥಿಕ ನಷ್ಟ ಉಂಟಾಗುತ್ತಿದೆ ಎಂದಿದ್ದಾರೆ. ೧೯೭೨ರಲ್ಲಿ ಸ್ಥಾಪಿಸಿದ ಕಂಟಿಕಟ್ಟೆ ಸೇತುವೆ ಸಂಚಾರದ ಹೊರತಾಗಿ   ಕೃಷಿ  ಪ್ರದೇಶಕ್ಕೆ ನೀರು ಹರಿಯದಿರುವಂತೆಯೂ  ಕೃಷಿಗೆ ಬೇಕಾಗಿ ನೀರು ಸಂಗ್ರಹಿಸಿಡುವ ಅಗತ್ಯದ ಹಿನ್ನೆಲೆಯಲ್ಲಿ ವಿಸಿಬಿ ವ್ಯವಸ್ಥೆಯೊಂದಿಗೆ ಸೇತುವೆ ನಿರ್ಮಿಸಲಾಗಿತ್ತು. ಈ ಮೊದಲು ಇದರ ಮೂಲಕ ಬಸ್ ಸಂಚಾರ ನಡೆಸುತ್ತಿತ್ತು ಎಂದು ಸಮಿತಿ ತಿಳಿಸಿದೆ. ಈ ವಿಷಯದಲ್ಲಿ ತುರ್ತು ಗಮನ ಹರಿಸಿ ಸೇತುವೆ ಪುನರ್ ನಿರ್ಮಾಣ ವಿಸಿಬಿ ವ್ಯವಸ್ಥೆಯೊಂದಿಗೆ ಮಾಡಬೇಕು, ಸ್ಥಳೀಯರ, ಕೃಷಿಕರ ಆತಂಕವನ್ನು ಪರಿಹರಿಸಬೇಕೆಂದು ಆಗ್ರಹಿಸಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸಮಿತಿ  ಮನವಿ ನೀಡಿದೆ.  ತಾಲೂಕು ಮಟ್ಟದಲ್ಲಿ ನಡೆದ ಅದಾಲತ್‌ನಲ್ಲೂ ಈ ಬಗ್ಗೆ ಮನವಿ ಯನ್ನು ಚಂದ್ರಶೇಖರನ್ ನೀಡಿದ್ದರು.

RELATED NEWS

You cannot copy contents of this page