ಕಂಬದಲ್ಲಿ ದುರಸ್ತಿ ಕೆಲಸ ನಡೆಸುತ್ತಿದ್ದ ವಲಸೆ ಕಾರ್ಮಿಕನಿಗೆ ವಿದ್ಯುತ್ ಶಾಕ್

ಕಾಸರಗೋಡು: ಬಿರುಗಾಳಿಗೆ ಅಸ್ತವ್ಯಸ್ತವಾಗಿ ಬಿದ್ದ ವಿದ್ಯುತ್ ಕಂಬದ ತಂತಿಯನ್ನು ಮರು ಸ್ಥಾಪಿಸುವ ಕೆಲಸದಲ್ಲಿ ನಿರತನಾದ ವಲಸೆ ಕಾರ್ಮಿಕನಿಗೆ ವಿದ್ಯುತ್ ಶಾಕ್ ತಗಲಿ ಕೆಳಕ್ಕೆ ಬಿದ್ದು, ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಕೊಲ್ಕತ್ತ ನಿವಾಸಿ ಟೋಮಿ (40) ವಿದ್ಯುತ್ ಶಾಕ್ ತಗಲಿದ ಕಾರ್ಮಿಕ. ಚೆರುವತ್ತೂರು ಕಾಡಾಂಕೋಡು ಸರಕಾರಿ ಹೈಯರ್ ಸೆಕೆಂಡರಿ ಶಾಲಾ ಪರಿಸರದಲ್ಲಿ ರಾತ್ರಿ ಭಾರೀ ಬಿರುಗಾಳಿಗೆ ಮಾವಿನ ಮರವೊಂದು ಬಿದ್ದು ಅಲ್ಲಿನ ಐದು ವಿದ್ಯುತ್ ತಂತ್ರಿಗಳು ಕಡಿದು ಬಿದ್ದಿದ್ದವು. ಅದನ್ನು ಸರಿಪಡಿಸಲೆಂದು ಟೋಮಿ ನಿನ್ನೆ ವಿದ್ಯುತ್ ಕಂಬಕ್ಕೇರಿ ದುರಸ್ತಿ ಕೆಲಸ ನಡೆಸುತ್ತಿದ್ದ ವೇಳೆ ಆತನಿಗೆ ದಿಢೀರ್ ಆಗಿ ವಿದ್ಯುತ್ ಶಾಕ್ ತಗಲಿ ಕೆಳಕ್ಕೆ ಬಿದ್ದಿದ್ದಾನೆ. ಅದನ್ನು ಕಂಡ ಇತರ ಕಾರ್ಮಿಕರು ಆತನನ್ನು ತಕ್ಷಣ ಸಮೀಪದ ಆಸ್ಪತ್ರೆಯೊಂದಕ್ಕೆ ಸಾಗಿಸಿ ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಅಲ್ಲಿಂದ ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ  ದಾಖಲಿಸಲಾಯಿತು. ಆತನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.

You cannot copy contents of this page