ಕಟ್ಟತ್ತಡ್ಕ ನಿವಾಸಿ ಎಂ.ಬಿ.ಬಿ.ಎಸ್ ವಿದ್ಯಾರ್ಥಿ ಟಿಪ್ಪರ್ ಲಾರಿ ಢಿಕ್ಕಿ ಹೊಡೆದು ಮೃತ್ಯು
ಕುಂಬಳೆ: ಪುತ್ತಿಗೆ ಬಳಿಯ ಕಟ್ಟತ್ತಡ್ಕ ನಿವಾಸಿಯಾದ ಎಂ.ಬಿ.ಬಿ.ಎಸ್ ವಿದ್ಯಾರ್ಥಿ ಟಿಪ್ಪರ್ ಲಾರಿ ಢಿಕ್ಕಿ ಹೊಡೆದು ಮೃತಪಟ್ಟ ದಾರುಣ ಘಟನೆ ನಡೆದಿದೆ.
ಕಟ್ಟತ್ತಡ್ಕ ಎ.ಕೆ.ಜಿ ನಗರದಲ್ಲಿ ವಾಸಿಸುವ ಮೊಗ್ರಾಲ್ ಕೊಪ್ಪಳ ನಿವಾಸಿ ಅಹಮ್ಮದ್‌ರ ಪುತ್ರ ಎಂ.ಕೆ. ಮೊಹಮ್ಮದ್ ರಾಶಿದ್ (21) ಮೃತಪಟ್ಟ ದುರ್ದೈವಿಯಾಗಿದ್ದಾರೆ. ನಿನ್ನೆ ರಾತ್ರಿ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಅಪಘಾತ ಸಂಭವಿಸಿದೆ. ಮೊಹಮ್ಮದ್ ರಾಶಿದ್ ಕೊಯಂಬತ್ತೂರಿನಲ್ಲಿ ದ್ವಿತೀಯ ವರ್ಷ ಎಂ.ಬಿ.ಬಿ.ಎಸ್ ವಿದ್ಯಾರ್ಥಿ ಯಾಗಿದ್ದರು. ನಿನ್ನೆ ರಾತ್ರಿ ಬೈಕ್ ರಸ್ತೆ ಬದಿ ನಿಲ್ಲಿಸಿ ಮತ್ತೊಂದು ಬದಿಯಲ್ಲಿರುವ ಹೋಟೆಲ್‌ನಿಂದ ಆಹಾರ ಖರೀದಿಸಿ ರಸ್ತೆ ದಾಟುತ್ತಿ ದ್ದಾಗ ಟಿಪ್ಪರ್ ಲಾರಿ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿರುವುದಾಗಿ ಮನೆಯವರಿಗೆ ಮಾಹಿತಿ ಲಭಿಸಿದೆ. ಅಪಘಾತ ಸುದ್ದಿ ತಿಳಿದು ಸಂಬಂಧಿ ಕರು ನಿನ್ನೆ ರಾತ್ರಿಯೇ ಕೊಯಂಬ ತ್ತೂರಿಗೆ ತೆರಳಿದ್ದಾರೆ. ಪುತ್ರ ಅಪ ಘಾತ ದಲ್ಲಿ ಮೃತಪಟ್ಟ ಬಗ್ಗೆ ತಿಳಿದು ಗಲ್ಫ್‌ನಲ್ಲಿರುವ ತಂದೆ ಅಹಮ್ಮದ್ ಊರಿಗೆ ಮರಳಿ ಬಂದಿದ್ದಾರೆ.
ರಜೆಯಲ್ಲಿ ಊರಿಗೆ ಬಂದಿದ್ದ ಮೊಹಮ್ಮದ್ ರಾಶಿದ್ ಒಂದು ವಾರ ಹಿಂದೆ ಕೊಯಂಬತ್ತೂರಿಗೆ ಮರಳಿ ದ್ದರು. ತಾಯಿ ಕೊಡ್ಯಮ್ಮೆ ಕುಂಡಾ ಪುವಿನ ಸೌದರ ತಂದೆ ಇಬ್ರಾಹಿಂ ಹಾಜಿ 12 ದಿನಗಳ ಹಿಂದೆ ಮೃತಪಟ್ಟಿ ದ್ದರು. ಈ ಸಂಬಂಧ ನಡೆದ ಕಾರ್ಯ ಕ್ರಮದಲ್ಲೂ ಮೊಹಮ್ಮದ್ ರಾಶಿದ್ ಪಾಲ್ಗೊಂಡಿದ್ದರು.
ಮೊಹಮ್ಮದ್ ರಾಶಿದ್‌ರ ಅಕಾಲಿಕ ನಿಧನದಿಂದ ನಾಡಿನಲ್ಲಿ ಶೋಕ ಸಾಗರ ಸೃಷ್ಟಿಸಿದೆ. ಮೃತರು ತಂದೆ, ತಾಯಿ, ಸಹೋದರ, ಸಹೋದರಿಯ ರಾದ ಹಾದಿಲ್, ಸಫಾ, ನಿದ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.