ಕಡಲ್ಕೊರೆತ ಭೀತಿ: ಸಮುದ್ರ ತೀರದಲ್ಲಿ ಟೆಟ್ರೋಪೋಡ್ ಉಪಯೋಗಿಸಿ ತಡೆಗೋಡೆ ನಿರ್ಮಾಣಕ್ಕೆ ಪ್ರೊಪೋಸಲ್
ಕಾಸರಗೋಡು: ನೀರಾವರಿ ಉಪ ವಿಭಾಗದ ಅಧೀನದಲ್ಲಿರುವ ಜಿಲ್ಲೆಯ ತಲಪಾಡಿಯಿಂದ ತೃಕ್ಕನ್ನಾಡ್‌ವರೆಗಿನ ೮೭.೬೫ ಕಿಲೋ ಮೀಟರ್ ಸಮುದ್ರ ತೀರದಲ್ಲಿ ಮಳೆಗಾಲದಲ್ಲಿ ಕಂಡು ಬರುವ ತೀವ್ರ ಕಡಲ್ಕೊರೆತವನ್ನು ಎದುರಿ ಸುವುದಕ್ಕಾಗಿ ಟೆಟ್ರೋಪೋಡ್ ಉಪಯೋಗಿಸಿಕೊಂಡಿರುವ ಕಾಮಗಾರಿಗಳನ್ನು ನಡೆಸುವುದಕ್ಕಾಗಿ ತೀರ ವಲಯದ ವಿವಿಧ ಪ್ರದೇಶಗಳಿಗಿರುವ ಪ್ರೊಪೋಸಲ್ ಉನ್ನತಾಧಿಕಾರಿಗಳಿಗೆ ಸಲ್ಲಿಸಿರುವುದಾಗಿ ಕಾಸರಗೋಡು ನೀರಾವರಿ ಉಪ ವಿಭಾಗ ಎಕ್ಸಿ ಕ್ಯೂಟಿವ್ ಇಂಜಿನಿಯರ್ ತಿಳಿಸಿದ್ದಾರೆ. ಈ ವಿಷಯದಲ್ಲಿ ರಾಜ್ಯ ಸರಕಾರದ ತಾಲೂಕು ಮಟ್ಟದ ಅದಾಲತ್‌ನಲ್ಲಿ ಮೊಗ್ರಾಲ್ ದೇಶೀಯವೇದಿ ನೀಡಿದ ದೂರಿನಂತೆ ಸಮುದ್ರ ತೀರ ವಲಯದಲ್ಲಿ ವೈಜ್ಞಾನಿಕವಾದ ರೀತಿಯ ಟೆಟ್ರೋ ಪೋಡ್‌ನಂತಹ ಸುರಕ್ಷಾ ಯೋ ಜನೆಗಳನ್ನು ಜ್ಯಾರಿಗೊಳಿಸಬೇಕೆಂದು ಆಗ್ರಹಿಸಲಾಗಿತ್ತು. ಇದಕ್ಕಿರುವ ಉತ್ತರವಾಗಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಆ ಮಾಹಿತಿಯನ್ನು ದೇಶೀಯವೇದಿ ಕಾರ್ಯದರ್ಶಿಗೆ ಲಿಖಿತವಾಗಿ ತಿಳಿಸಿದ್ದಾರೆ.
ಮಂಜೇಶ್ವರ ತಾಲೂಕಿನ ಕಣ್ವತೀರ್ಥ ಕಡಪ್ಪುರ, ಶಿರಿಯ ಕಡಪ್ಪುರ, ಕೊಯ್ಪಾಡಿ ಕಡಪ್ಪುರ, ನಾಂಗಿ-ಕೊಪ್ಪಳಂ ಕಡಪ್ಪುರ, ಕಾಸರಗೋಡು ತಾಲೂಕಿನ ಕಾವುಗೋಳಿ ಕೀಯೂರು ಹಾರ್ಬರ್, ಉದುಮ ಪಂಚಾಯತ್‌ನ ತೃಕ್ಕನ್ನಾಡ್, ಬೇಕಲ ಕಡಪ್ಪುರ, ಕಾಪಿಲ್ ಬೀಚ್, ಪೊವ್ವಲ್ ಕಡಪ್ಪುರ ಎಂಬೀ ಸ್ಥಳಗಳಲ್ಲಿ ಟೆಟ್ರೋಪೋಡ್ ಉಪಯೋಗಿಸಿ ಇರುವ ಭಿತ್ತಿ ನಿರ್ಮಾಣಕ್ಕೆ ಪ್ರೊಪೋಸಲ್ ನೀಡಿರುವುದಾಗಿ ಎಕ್ಸಿಕ್ಯೂಟಿವ್ ಇಂಜಿನಿಯರ್ ತಿಳಿಸಿದ್ದಾರೆ. ಈ ಯೋಜನೆಯನ್ನು ತುರ್ತಾಗಿ ಜ್ಯಾರಿಗೊಳಿಸಲು ಸರಕಾರ ಯೋಜನೆಗೆ ಮೊತ್ತ ಹಾಗೂ ಅಂಗೀಕಾರ ನೀಡಬೇಕೆಂದು ದೇಶೀಯವೇದಿ ಆಗ್ರಹಿಸಿದೆ.