ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರ ವಾರ್ಷಿಕ ಜಾತ್ರೆ 14ರಿಂದ
ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರದ ವರ್ಷಾವಧಿ ಜಾತ್ರಾ ಮಹೋತ್ಸವ ಜನವರಿ 14ರಿಂದ 18ರ ವರೆಗೆ ವೇದ ಮೂರ್ತಿ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಯವರ ಕಾರ್ಮಿಕತ್ವದಲ್ಲಿ ವಿವಿಧ ಕಾರ್ಯಕ್ರಮ ಗಳೊಂದಿಗೆ ಜರಗಲಿದೆ.
14ರಂದು ಬೆಳಿಗ್ಗೆ 8ರಿಂದ ಸೋಪಾನ ಸಂಗೀತ (ಅಷ್ಟಪದಿ), 9.30ರಿಂದ ಹಸಿರುವಾಣಿ ಹೊರೆಕಾ ಣಿಕೆ ಸಮರ್ಪಣೆ, 10ರಿಂದ ಶ್ರೀಬಲಿ, ಧ್ವಜಾರೋಹಣ, ತುಲಾಭಾರ ಸೇವೆ, ಮಹಾಪೂಜೆ, ನಿತ್ಯಬಲಿ, ಸಂಜೆ 5ಕ್ಕೆ ನಡೆ ತೆರೆಯುವುದು, 5.15ರಿಂದ ಡಿ. ಸಾವಿತ್ರಿ ಕೆ. ಭಟ್ ದೊಡ್ಡಮಾಣಿ, ಕುಂಬಳ ಮತ್ತು ಬಳಗದಿಂದ ಕರ್ನಾಟಿಕ್ ಸಂಗೀತ ಕಛೇರಿ, 6.30ಕ್ಕೆ ದೀಪಾರಾಧನೆ, 7.30ರಿಂದ ರಂಗಪೂಜೆ, ಉತ್ಸವ ಶ್ರೀ ಭೂತಬಲಿ ನಡೆಯಲಿದೆ.
15ರಂದು ಬೆಳಿಗ್ಗೆ 6ಕ್ಕೆ ಉತ್ಸವ ಶ್ರೀಬಲಿ, 10.30ರಿಂದ ತುಲಾಭಾರ ಸೇವೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ನಿತ್ಯಬಲಿ, ಸಂಜೆ 4.30ಕ್ಕೆ ನಡೆ ತೆರೆಯುವುದು, 5.15ರಿಂದ ರಾಗಮಾಲಿಕಾ ನೆಲ್ಲಿಕಟ್ಟೆ ಅವರಿಂದ ಭಕ್ತಿ ರಸಮಂಜರಿ, 6.30ಕ್ಕೆ ದೀಪಾರಾಧನೆ, ರಾತ್ರಿ 7.30ರಿಂದ ಪೂಜೆ, ಸಣ್ಣ ದೀಪೊ ತ್ಸವ, ಶ್ರೀ ಭೂತಬಲಿ, 16ರಂದು ಬೆಳಿಗ್ಗೆ 6ರಿಂದ ಉತ್ಸವಶ್ರೀಬಲಿ, 10.30ರಿಂದ ತುಲಾಭಾರಸೇವೆ, ಸಂಜೆ 4.30ಕ್ಕೆ ನಡೆ ತೆರೆಯುವುದು, 6.30ಕ್ಕೆ ವಿಶ್ವರೂಪದರ್ಶನ, ವಿನಾಯಕ ಹೆಗಡೆ ಮತ್ತು ಬಳಗದಿಂದ ಹಿಂದೂಸ್ತಾನಿ ಸಂತವಾಣಿ, ದಾಸವಾಣಿ,ರಾತ್ರಿ 9ರಿಂದ ಪೂಜೆ, ನಡುದೀಪೋತ್ಸವ, ಶ್ರೀಬಲಿ ನಡೆಯಲಿದೆ.
17ರಂದು ಬೆಳಿಗ್ಗೆ 6ರಿಂದ ಉತ್ಸವ ಶ್ರೀಬಲಿ, 10.30ರಿಂದ ತುಲಾಭಾರ ಸೇವೆ, ಸಂಜೆ 4ಕ್ಕೆ ನಡೆ ತೆರೆಯುವುದು, 4.30ರಿಂದ ನಾದಂ ಆರ್ಕೆಸ್ಟ್ರ ನೀಲೇಶ್ವರ ಅವರಿಂದ ಭಕ್ತಿಗಾನಮೇಳ, 6ರಿಂದ ತಾಯಂ ಬಕ, 6.30ಕ್ಕೆ ದೀಪಾರಾಧನೆ, ರಾತ್ರಿ 8ರಿಂದ ಪೂಜೆ, ಶ್ರೀಬಲಿ ಉತ್ಸವ, 9.45ರಿಂದ ವಿಶೇಷ ಬೆಡಿ ಪ್ರದಶನ, 18ರಂದು ಮುಂಜಾನೆ 2.45ರಿಂದ ಶ್ರೀ ಭೂತಬಲಿ, ಶಯನ, ಕವಾಟಬಂಧನ, ಬೆಳಿಗ್ಗೆ 6ರಿಂದ ಕವಾಟೋದ್ಘಾಟನೆ, 10.30ರಿಂದ ತುಲಾಭಾರಸೇವೆ, ಅಪರಾಹ್ನ 3.30ರಿಂದ ಉತ್ಸವಬಲಿ, ಘೋಷ ಯಾತ್ರೆ, ಶೇಡಿಗುಮ್ಮೆಯಲ್ಲಿ ಅವಭೃತ ಸ್ನಾನ, ರಾತ್ರಿ 7.30ರಿಂದ ಬಟ್ಟಲು ಕಾಣಿಕೆ, ರಾಜಾಂಗಣ ಪ್ರಾಸಾದ, ಧ್ವಜಾವರೋಹಣ ನಡೆಯಲಿದೆ.
19ರಂದು ಬೆಳಿಗ್ಗೆ 7.30ಕ್ಕೆ ಬೆಳಗ್ಗಿನ ಪೂಜೆ, 10ರಿಂದ ಶ್ರೀದೇವರಿಗೆ ಪಂಚಾ ಮೃತ ಮತ್ತು ಎಳನೀರು ಅಭಿಷೇಕ, ಸಂಜೆ 6.30ಕ್ಕೆ ದೀಪಾರಾಧನೆ, 7ರಿಂದ ಭಜನೆ, 8ರಿಂದ ಮಹಾಪೂಜೆ, ಶ್ರೀಭೂತಬಲಿ ನಡೆಯಲಿದೆ.