ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನವೀಕರಣ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಚಾಲನೆ

ಕುಂಬಳೆ:  ಕಣಿಪುರ ಶ್ರೀ ಗೋ ಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀ ಗೋಪಾಲಕೃಷ್ಣ, ಶ್ರೀ ಮಹಾಗಣಪತಿ ಹಾಗೂ  ಶ್ರೀ ವನಶಾಸ್ತಾರ ದೇವರುಗಳ ನವೀಕರಣ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋ ತ್ಸವಕ್ಕೆ ಇಂದು ಸಂಭ್ರಮದ ಚಾಲನೆ ದೊರಕಿದೆ. ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ಬಳಿಕ ಉಗ್ರಾಣ ಮುಹೂರ್ತ ನಡೆಯಿತು. ಮಧ್ಯಾಹ್ನ ೧೨.೩೦ಕ್ಕೆ ಅನ್ನದಾಸೋಹಂ, ಸಂಜೆ ೫.೩೦ಕ್ಕೆ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಯವರಿಗೆ ಪೂರ್ಣಕುಂ ಭ ಸ್ವಾಗತ, ಸಾಮೂಹಿಕ ಪ್ರಾರ್ಥನೆ, ೬ಕ್ಕೆ ಹಸಿರು ಹೊರೆಕಾಣಿಕೆಯ ಶೋ ಭಾಯಾತ್ರೆ ಕುಂಬಳೆ ಕೃಷ್ಣ ನಗರದಿಂದ ಹೊರಡಲಿದೆ. ೬.೧೫ರಿಂದ ಧಾರ್ಮಿಕ ವಿಧಿ ವಿಧಾನಗಳು, ೭ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಸಭಾ ಕಾರ್ಯಕ್ರಮ, ರಾತ್ರಿ ೮ಕ್ಕೆ ಹಸಿರು ಹೊರೆಕಾಣಿಕೆ ಶೋಭಾಯಾತ್ರೆ ಪ್ರವೇಶ, ಸ್ವಾಗತ, ಸಮರ್ಪಣೆ, ೮.೩೦ಕ್ಕೆ ಮಾಣಿಲ ಶ್ರೀ ಮೋಹನದಾಸಪರಮಹಂಸ ಸ್ವಾಮೀಜಿಯವರ ನೇತೃತ್ವದಲ್ಲಿ  ಸಾಮೂ ಹಿಕ ಭಜನೆ, ೯ಕ್ಕೆ ಕಣಿಪುರ ಜಿ.ಕೆ. ಟೈಗರ್ಸ್ ನಿಂದ ಹುಲಿಕುಣಿತ ನಡೆಯಲಿದೆ. ನಾಳೆ ಬೆಳಿಗ್ಗೆ ೬ರಿಂದ ಗಣಪತಿಹೋಮ ಸಹಿತ ವಿವಿಧ ವೈದಿಕ ಕಾರ್ಯಕ್ರಮ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಒಳವೇದಿಕೆ ಹಾಗೂ ಹೊರ ವೇದಿಕೆಗಳಲ್ಲಿ ನಡೆಯ ಲಿದೆ. 

Leave a Reply

Your email address will not be published. Required fields are marked *

You cannot copy content of this page