ಕನ್ನಡ ಹೋರಾಟ ಸಮಿತಿ ಸಭೆ: ಕನ್ನಡ ಸಮಸ್ಯೆಗಳ ಬಗ್ಗೆ ಪ್ರಾದೇಶಿಕ ಮಟ್ಟದಲ್ಲಿ ಒಗ್ಗಟ್ಟಿಗೆ ತೀರ್ಮಾನ
ಕಾಸರಗೋಡು: ಕನ್ನಡ ಹೋರಾಟ ಸಮಿತಿಯ ನೇತೃತ್ವದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳ ಪ್ರಮುಖರ ಸಭೆ ಅಡ್ಕತ್ತಬೈಲು ಉಡುಪಿ ಗಾರ್ಡನ್ ಹೊಟೇಲ್‌ನ ಮಥುರಾ ಸಭಾಂಗಣದಲ್ಲಿ ಜರಗಿತು. ಹೋರಾಟ ಸಮಿತಿಯ ಅಧ್ಯಕ್ಷ ನ್ಯಾಯವಾದಿ ಮುರಳೀಧರ ಬಳ್ಳಕ್ಕುರಾಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡ ಪರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪ್ರಾದೇಶಿಕ ಮಟ್ಟದಲ್ಲಿ ಕನ್ನಡಿಗರನ್ನು ಒಟ್ಟುಸೇರಿಸುವ ಕೆಲಸ ಮಾಡಲು ತೀರ್ಮಾನಿಸಲಾಯಿತು. ಪ್ರತೀ ಪಂಚಾಯತ್ ಮಟ್ಟದಲ್ಲೂ ಸಂಚಾಲಕರನ್ನು ನೇಮಕ ಮಾಡಲಾಯಿತು. ಸಮಿತಿಯ ಉಪಾಧ್ಯಕ್ಷ ಮಹಾಲಿಂಗೇಶ್ವರ ಭಟ್ ಪ್ರಸ್ತಾಪಿಸಿದರು. ರವೀಶ ತಂತ್ರಿ ಕುಂಟಾರು, ರಾಮ ಪ್ರಸಾದ್ ಕಾಸರಗೋಡು, ಟಿ. ಶಂಕರನಾರಾಯಣ ಭಟ್, ಪ್ರದೀಪ್ ಶೆಟ್ಟಿ, ಡಿ.ಡಿ. ಸದಾಶಿವ ರಾವ್, ಮಹೇಶ, ಗುರುಪ್ರಸಾದ್ ಕೋಟೆಕಣಿ, ಡಾ. ಬೇ.ಸಿ. ಗೋಪಾಲಕೃಷ್ಣ ಭಟ್, ನಾರಾಯಣ ಭಟ್ ಬದಿಯಡ್ಕ ಮಾತನಾಡಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕಾಸರಗೋಡು ಸ್ವಾಗತಿಸಿ, ಉಪಾಧ್ಯಕ್ಷ ಸತೀಶ್ ಕುಮಾರ್ ವಂದಿಸಿದರು.