ಕರಾವಳಿ ಹರತಾಳ ಆರಂಭ: ಸ್ತಬ್ದಗೊಂಡ ಮೀನುಗಾರಿಕಾ ವಲಯ

ಕಾಸರಗೋಡು: ಸಮುದ್ರ ಮರಳು ಗಣಿಗಾರಿಕೆಗೆ ಅನುಮತಿ ನೀಡಿದ ಕೇಂದ್ರ ಸರಕಾರದ ನಿಲುವನ್ನು ಪ್ರತಿಭಟಿಸಿ ಫಿಶರೀಸ್  ಕೋರ್ಡಿನೇಶನ್ ಸಮಿತಿ ಘೋಷಿಸಿದ 24 ತಾಸುಗಳ ಕರಾವಳಿ ಹರತಾಳ ರಾಜ್ಯದಲ್ಲಿ ನಿನ್ನೆ ರಾತ್ರಿ 12 ಗಂಟೆಗೆ ಆರಂಭಗೊಂಡಿದೆ. ಹರತಾಳ ರಾಜ್ಯದ ಮೀನುಗಾರಿಕಾ  ವಲಯವನ್ನು ಪೂರ್ಣವಾಗಿ ಸ್ತಬ್ದಗೊಳಿಸಿದೆ.

ಹರತಾಳದಲ್ಲಿ ಬೆಸ್ತರು ಮತ್ತು ಮೀನು ಮಾರಾಟ ಕಾರ್ಮಿಕರು ಸಹ ಕರಿಸುತ್ತಿದ್ದು, ಅದಕ್ಕೆ ಬೆಂಬಲ ಸೂಚಿಸಿ ಮೀನುಗಾರರು ಇಂದು ಸಮುದ್ರದಲ್ಲಿ ಮೀನುಗಾರಿಕೆಗೆ ಇಳಿಯಲಿಲ್ಲ. ಮಾತ್ರವಲ್ಲ  ಮೀನು ಮಾರಾಟಗಾರರೂ ಇಂದು  ಮೀನು ಮಾರಾ ಟದಿಂದ ದೂರ ಸರಿದು ನಿಂತಿದ್ದಾರೆ. ಹರತಾಳದಿಂ ದಾಗಿ ಮೀನುಗಾ ರಿಕಾ ಬಂದರುಗಳು, ಫಿಶ್ ಲ್ಯಾಂಡಿಂಗ್ ಸೆಂಟರ್‌ಗಳು ಮತ್ತು ಮೀನು ಮಾರ್ಕೆಟ್ ಕಾರ್ಯಚಟುವ ಟಿಕೆಗಳು ಪೂರ್ಣವಾಗಿ ಸ್ತಬ್ದಗೊಂಡಿದೆ.

ಹರತಾಳದಂಗವಾಗಿ ಇಂದು ಬೆಳಿಗ್ಗೆ ರಾಜ್ಯದ 125 ಕೇಂದ್ರಗಳಲ್ಲಿ ಮೀನು ಕಾರ್ಮಿಕರು ಹಾಗೂ ಮಾರಾಟಗಾರರ ಸಂಯುಕ್ತ ಆಶ್ರಯ ದಲ್ಲಿ ಪ್ರತಿಭಟನಾ ಮೆರವಣಿಗೆ ಹಾಗೂ  ಸಭೆಗಳನ್ನು ನಡೆಸ ಲಾಯಿತು. ಹರತಾಳ ಇಂದು ರಾತ್ರಿ 12 ಗಂಟೆ ತನಕ ಮುಂದುವರಿಯಲಿದೆ. ಆದರೆ ಇದೇ ಸಂದರ್ಭದಲ್ಲಿ ಕರ್ನಾಟಕ ದಿಂದ ತರಲಾದ ಮೀನುಗಳನ್ನು ಕೆಲವರು ಇಂದು ರಾಜ್ಯದ ಹಲವೆಡೆ ಗಳಲ್ಲಿ  ಮಾರಾಟದಲ್ಲಿ ತೊಡಗಿದ್ದಾರೆ.

You cannot copy contents of this page