ಕರುಣೆ ತೋರಿದ ಕಾರುಣ್ಯ ಪ್ಲಸ್ ಲಾಟರಿ: ಬಡಗಿಗೆ ಒಲಿದ 80 ಲಕ್ಷ ರೂ.
ಕಾಸರಗೋಡು: ಕಾರುಣ್ಯ ಪ್ಲಸ್ ಲಾಟರಿ ಹೆಸರಿಗೆ ತಕ್ಕಂತೆ ಕರುಣೆ ತೋರಿಸಿದೆ. ಆಗಸ್ಟ್ 29ರಂದು ಡ್ರಾ ನಡೆದ ಕೇರಳ ರಾಜ್ಯ ಲಾಟರಿ ಕಾರುಣ್ಯ ಪ್ಲಸ್‌ನ ಪ್ರಥಮ ಬಹುಮಾನ 80 ಲಕ್ಷ ರೂ. PK602476 ಎಂಬ ನಂಬ್ರಕ್ಕೆ ಲಭಿಸಿದೆ. ಚಟ್ಟಂಚಾಲ್ ನಿವಾಸಿ ಅಶೋಕನ್‌ರಿಗೆ ಈ ಅದೃಷ್ಟ ಒಲಿದಿದೆ. ಬಡವರಾದ ಇವರು ಮರದ ಕೆಲಸ ಮಾಡಿಕೊಂಡು ಬದುಕು ಸವೆಸುತ್ತಿದ್ದರು. ಇವರು ಕಾಸರಗೋಡು ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮಧು ಲಾಟರಿ ಏಜೆನ್ಸಿಯಿಂದ ಟಿಕೇಟ್ ಖರೀದಿಸಿ ದ್ದರು. ಮಧು ಲಾಟರಿ ಏಜೆನ್ಸಿಯಲ್ಲಿ ಈ ಮೊದಲು ಹಲವರು ತಮ್ಮ ಅದೃಷ್ಟ ಪರೀಕ್ಷೆ ಮಾಡಿದ್ದು, ಹಲವು ಲಾಟರಿಗಳ ಪ್ರಥಮ ಬಹುಮಾನ ಇಲ್ಲಿಂದ ಲಭಿಸಿದೆ.