ಕರ್ನಾಟಕ ಮದ್ಯ ಪತ್ತೆ
ಮಂಜೇಶ್ವರ: ಕಯ್ಯಾರು ಗ್ರಾಮದ ಪರಂಬಳ ಅಂಗನವಾಡಿ ಸಮೀಪದಲ್ಲಿ ಅಕ್ರಮವಾಗಿ ಬಚ್ಚಿಡಲಾಗಿದ್ದ 3.42 ಲೀಟರ್ ಕರ್ನಾಟಕ ನಿರ್ಮಿತ ಮದ್ಯ ವನ್ನು ಕುಂಬಳೆ ಅಬಕಾರಿ ರೇಂಜ್ ಅಧಿಕಾರಿಗಳ ತಂಡ ನಿನ್ನೆ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಪ್ರಿವೆಂಟೀವ್ ಆಫೀಸರ್ ಪೀತಾಂಬರನ್ ಕೆ ನೇತೃತ್ವದಲ್ಲಿ ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ರಂಜಿತ್ ಟಿ.ಕೆ, ಅಖಿಲೇಶ್ ಎಂ.ಎಂ ಮತ್ತು ಚಾಲಕ ಪ್ರವೀಣ್ ಎಂಬಿವರನ್ನೊಳಗೊಂಡ ತಂಡ ಅಬಕಾರಿ ಕಾರ್ಯಾಚರಣೆ ನಡೆಸಿದೆ.