ಕರ್ನಾಟಕ ಮದ್ಯ ವಶ

ಕಾಸರಗೋಡು: ಕೂಡ್ಲು ಮಜಾಲ್‌ನಲ್ಲಿ ಕಾಸರಗೋಡು ಐ.ಬಿಯ ಪ್ರಿವೆಂಟಿವ್ ಆಫೀಸರ್ ಬಿಜೋಯ್‌ರ ನೇತೃತ್ವದ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ೧೦.೮ ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.ಇದಕ್ಕೆ ಸಂಬಂಧಿಸಿ ಕೂಡ್ಲು ಮಜಾಲ್ ನಿವಾಸಿ ಅನಿಲ್ ಕುಮಾರ್ (44) ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಪ್ರಿವೆಂಟೀವ್ ಆಫೀಸರ್ ರಂಜಿತ್ ಕೆ.ವಿ., ಸಿಇಒಗಳಾದ ಕಣ್ಣನ್ ಕುಂಞಿ ಡಿ, ಅಮಲ್‌ಜಿತ್, ಅಜಯ್ ಟಿ.ಸಿ, ಸಜಿತ್ ಕುಮಾರ್ ಮತ್ತು ಫಸೀಲಾ ಎಂಬವರು ಒಳಗೊಂಡಿದ್ದರು.

You cannot copy contents of this page