ಕರ್ನಾಟಕ ಮದ್ಯ ಸಹಿತ ಓರ್ವ ಸೆರೆ: ಸ್ಕೂಟರ್ ವಶ

ಮಂಜೇಶ್ವರ: ಮೀಂಜ ಗ್ರಾಮದ ತೊಟ್ಟೆತ್ತೋಡಿಯಲ್ಲಿ ನಿನ್ನೆ ಕಾಸರಗೋಡು ಅಬಕಾರಿ ಸರ್ಕಲ್ ಕಚೇರಿಯ ಪ್ರಿವೆಂಟಿವ್ ಆಫೀಸರ್ ಕೆ. ಪೀತಾಂಭರನ್‌ರ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಸ್ಕೂಟರ್‌ನಲ್ಲಿ ಸಾಗಿಸಲಾಗುತ್ತಿದ್ದ 16.650 ಲೀಟರ್ ಕರ್ನಾಟಕ ನಿರ್ಮಿತ ವಿದೇಶ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.

ಈ ಸಂಬಂಧ ಮೀಂಜ ಚಿಗುರುಪಾದೆ ಪುರಂದರ ಶೆಟ್ಟಿ ಎಂಬಾತನನ್ನು ಬಂಧಿಸಿ ಆತನ ವಿರುದ್ಧ ಅಬಕಾರಿ ಪ್ರಕರಣ ದಾಖಲಿಸಲಾಗಿದೆ. ಮಾಲು ಸಾಗಿಸಲು ಬಳಸಲಾದ ಸ್ಕೂಟರನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ.

ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಕುಂಬಳೆ ಐ.ಪಿ. ಪ್ರಿವೆಂಟಿವ್ ಆಫೀಸರ್‌ಗಳಾದ ಬಿಜೋಯ್, ಶ್ರೀನಿವಾಸನ್, ಸಿಪಿಒ ಅರುಣ್ ಮತ್ತು ಚಾಲಕ ವಿಜಯನ್ ಎಂಬವರು ಒಳಗೊಂಡಿದ್ದರು.

Leave a Reply

Your email address will not be published. Required fields are marked *

You cannot copy content of this page