ಕರ್ನಾಟಕ ಮದ್ಯ ಸಹಿತ ಓರ್ವ ಸೆರೆ

ಕುಂಬಳೆ: ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆಂಡ್ ಆಂಟಿ ನಾರ್ಕೋಟಿಕ್ ಸ್ಪೆಷಲ್ ಸ್ಕ್ವಾಡ್ ನಡೆಸಿದ ಕಾರ್ಯಾಚರಣೆಯಲ್ಲಿ ೪.೯೫ ಲೀಟರ್ ಕರ್ನಾಟಕ ಮದ್ಯವನ್ನು ವಶಪಡಿಸಲಾಗಿದೆ. ಈ ಸಂಬಂಧ ಕೊಯಿಪ್ಪಾಡಿ ವಿಲ್ಲೇಜ್‌ನ ಬಟ್ರಂಪಳ್ಳ ನಿವಾಸಿ ಕುಮಾರ (೫೩) ಎಂಬಾತನನ್ನು ಬಂಧಿಸಲಾಗಿದೆ. ಈತ ನ. ೧೬ರಂದು ಸ್ಕೂಟರ್‌ನಲ್ಲಿ ಮದ್ಯ ಸಾಗಿಸುತ್ತಿದ್ದಾಗ ಅಬಕಾರಿದಳದ ಸ್ಕ್ವಾಡ್ ಕಚೇರಿಯ ಪ್ರಿವೆಂಟಿವ್ ಆಫೀಸರ್ ಮುರಳಿ ಕೆ ವಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.

Leave a Reply

Your email address will not be published. Required fields are marked *

You cannot copy content of this page