ಕಲಾವಿದ ನಿಧನ
ಕೂಡ್ಲು: ಭಜನಾ ಕಲಾವಿದ, ಕೂಡ್ಲು ನಿವಾಸಿ ಬಾಬು ರೈ (75) ನಿಧನ ಹೊಂದಿದರು. ಇವರಿಗೆ ಹೃದಯಾಘಾತವುಂಟಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತರು ಪತ್ನಿ ದೇವಕಿ, ಮಕ್ಕಳಾದ ಸಂತೋಷ್, ನಿತೀಶ್, ನಿರೀಕ್ಷ, ಸೊಸೆಯಂದಿರಾದ ಶ್ರುತಿ, ದೀಕ್ಷಿತ, ಸಹೋದರ ಬಾಲಕೃಷ್ಣ, ಸಹೋದರಿ ರಾಜೀವಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಸವಾಕ್ ಕಾಸರಗೋಡು ಬ್ಲೋಕ್ ಸದಸ್ಯರಾಗಿರುವ
ಇವರ ನಿಧನಕ್ಕೆ ಸವಾಕ್ ಕಾಸರಗೋಡು ಜಿಲ್ಲಾ ಸಮಿತಿ ಸಂತಾಪ ಸೂಚಿಸಿದೆ.