ಕಲ್ಯೋಟ್ ಅವಳಿ ಕೊಲೆ ಪ್ರಕರಣ: ಅವಳಿ ಜೀವಾವಧಿ ಸಜೆಗೊಳಗಾದ 10 ಮಂದಿ ವೀಯೂರು ಸೆಂಟ್ರಲ್ ಜೈಲಿಗೆ : ನಾಲ್ಕು ಮಂದಿ ಕಾಕನಾಡ್ ಜೈಲಿನಲ್ಲಿ
ಕೊಚ್ಚಿ: ಪೆರಿಯಾ ಕಲ್ಯೋಟ್ನ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ (19) ಮತ್ತು ಶರತ್ಲಾಲ್ (24)ರನ್ನು ಕೊಲೆಗೈದ ಪ್ರಕರಣದಲ್ಲಿ ಅವಳಿ ಜೀವಾವಧಿ ಶಿಕ್ಷೆಗೊಳಗಾದ 10 ಮಂದಿ ಹಾಗೂ ತಲಾ 5 ವರ್ಷದಂತೆ ಶಿಕ್ಷೆಗೊಳಗಾದ ನಾಲ್ಕು ಮಂದಿ ಆರೋಪಿ ಗಳು ಜೈಲು ಸೇರಿದ್ದಾರೆ. ಇವರೆಲ್ಲರೂ ಸಿಪಿಎಂ ಕಾರ್ಯಕರ್ತರಾಗಿದ್ದಾರೆ.
ಪೆರಿಯಾ ಪರಿಸರ ನಿವಾಸಿಗಳಾದ ಎ. ಪೀತಾಂಬರನ್ (51), ಸಜಿ ಸಿ ಜೋರ್ಜ್ (46), ಕೆ.ಎಂ. ಸುರೇಶ್ (33), ಕೆ. ಅನಿಲ್ ಕುಮಾರ್ (41), ಜಿ.ಗಿಜಿನ್ (32), ಆರ್. ಶ್ರೀರಾಗ್ (ಕುಟ್ಟು 28), ಎ. ಅಶ್ವಿನ್ (ಅಪ್ಪು 24), ಸುಬೀಶ್ (ಮಾಣಿ 35), ಟಿ. ರಂಜಿತ್ (52) ಮತ್ತು ಎ. ಸುರೇಂದ್ರನ್ (ವಿಷ್ಣುಸುರ 53) ಎಂಬವರಿಗೆ ಸೆಕ್ಷನ್ 302ರ ಪ್ರಕಾರ (ಕೊಲೆ) ನ್ಯಾಯಾಲಯ ಅವಳಿ ಜೀವಾವಧಿ ಸಜೆ ಹಾಗೂ ತಲಾ 2 ಲಕ್ಷರೂ.ನಂತೆ ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ. ಇವರನ್ನು ಬಳಿಕ ವೀಯೂರು ಸೆಂಟ್ರಲ್ ಜೈಲಿಗೆ ಸಾಗಿಸಲಾಗಿದೆ.
ಇದರ ಹೊರತಾಗಿ ಕೊಲೆ ಆರೋಪಿಗಳನ್ನು ಪೊಲೀಸ್ ಕಸ್ಟಡಿಯಿಂದ ಬಿಡಿಸಿ ಸಾಗಿಸಿದ ಅಪರಾಧಕ್ಕೆ ಸಂಬAಧಿಸಿ ಉದುಮ ಮಾಜಿ ಶಾಸಕ ಕೆ.ವಿ.ಕುಂuಟಿಜeಜಿiಟಿeಜರಾಮನ್ (61), ಕಾಞಂಗಾಡ್ ಬ್ಲೋಕ್ ಪಂ. ಅಧ್ಯಕ್ಷ ಕೆ. ಮಣಿಕಂಠನ್ (44), ರಾಘವನ್ ವೆಳುತ್ತೋಳಿ (57) ಮತ್ತು ಕೆ.ವಿ. ಭಾಸ್ಕರನ್ (61) ಎಂಬವರಿಗೆ ನ್ಯಾಯಾಲಯ ತಲಾ 5 ವರ್ಷ ಸಜೆ ಹಾಗೂ 10 ಸಾವಿರ ರೂ.ನಂತೆ ಜುಲ್ಮಾನೆ ವಿಧಿಸಿದೆ. ಇವರನ್ನು ಬಳಿಕ ಕಾಕನಾಡ್ ಜಿಲ್ಲಾ ಜೈಲಿಗೊಯ್ದು ಅಲ್ಲಿ ಕೂಡಿಹಾಕಲಾಗಿದೆ.
ಶಿಕ್ಷೆಗೊಳಗಾದವರು ಜುಲ್ಮಾನೆ ಪಾವತಿಸಿದಲ್ಲಿ ಅದರಲ್ಲಿ 20.7 ಲಕ್ಷ ರೂ.ವನ್ನು ಕೊಲೆಗೈಯ್ಯಲ್ಪಟ್ಟ ಕೃಪೇಶ್ ಮತ್ತು ಶರತ್ಲಾಲ್ರ ಕುಟುಂಬಕ್ಕೆ ಪಾಲು ಮಾಡಿ ನೀಡುವಂತೆಯೂ ತೀರ್ಪಿನಲ್ಲಿ ತಿಳಿಸಲಾಗಿದೆ.
2019 ಫೆಬ್ರವರಿ 17ರಂದು ರಾತ್ರಿ ಪೆರಿಯಾ ಕಲ್ಯೋಟ್ನಲ್ಲಿ ಕೃಪೇಶ್ ಮತ್ತು ಶರತ್ಲಾಲ್ರನ್ನು ಬರ್ಭರವಾಗಿ ಕೊಲೆಗೈಯ್ಯಲಾಗಿತ್ತು. ಈ ಕೊಲೆ ಪ್ರಕರಣದಲ್ಲಿ ಒಟ್ಟು 24 ಆರೋಪಿಗಳಿದ್ದು ಅದರಲ್ಲಿ 10 ಮಂದಿಯ ಮೇಲಿನ ಆರೋಪ ಸಾಬೀತುಗೊಳ್ಳದ ಹಿನ್ನೆಲೆಯಲ್ಲಿ ಕಳೆದವಾರ ನ್ಯಾಯಾಲಯ ಅವರನ್ನು ಖುಲಾಸೆಗೊಳಿಸಿ ತೀರ್ಪು ನೀಡಿತ್ತು.