ಕಲ್ಲಿಕೋಟೆ: ಕರಿಪ್ಪೂರ್ ವಿಮಾನಕ್ಕೆ ಬಾಂಬ್ ಬೆದರಿಕೆಯೊಡ್ಡಿದ ಆರೋಪಿ ಸೆರೆ
ಕಲ್ಲಿಕೋಟೆ: ಕರಿಪ್ಪೂರ್‌ನಲ್ಲಿ ರುವ ಕಲ್ಲಿಕೋಟೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಕ್ಕೆ ಬಾಂಬ್ ಬೆದರಿಕೆಯೊಡ್ಡಿದ ಆರೋಪಿ ಯನ್ನು ಗುರುತುಹಚ್ಚಿ ಬಂಧಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ.
ಪಾಲಕ್ಕಾಡ್ ಅನಂಙಡಿ ನಿವಾಸಿ ಮೊಹಮ್ಮದ್ ಇಜಾನ್ (30) ಬಂಧಿತ ಆರೋಪಿ. ಕರಿಪ್ಪೂರ್ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಕಲ್ಲಿಕೋಟೆ ವಿಮಾನ ನಿಲ್ದಾಣದಿಂದ ಅಬುದಾಬಿಗೆ ತೆರಳಬೇಕಾಗಿದ್ದ ಏರ್ ಅರೇಬಿಯಾ ವಿಮಾನದಲ್ಲಿ ಬಾಂಬ್ ಇರಿಸಿರುವುದಾಗಿ ಪ್ರಸ್ತುತ ನಿಲ್ದಾಣದ ನಿರ್ದೇಶಕರ ಕಚೇರಿಗೆ ಕಳೆದ ಸೋಮವಾರ ಇಮೈಲ್ ಮೂಲಕ ಸಂದೇಶ ಬಂದಿತ್ತು. ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಏರ್ ಅರೇಬಿಯಾ ವಿಮಾನವನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗಿತ್ತು. ಮಾತ್ರವಲ್ಲ ಇದರಿಂದಾಗಿ ವಿಮಾನ ಸೇವೆಗೂ ಅಡಚಣೆ ಉಂಟಾಗಿ ಪ್ರಯಾಣಿಕರು ತೀವ್ರ ಸಂಕಷ್ಟಕ್ಕೂ ಒಳಗಾಗಿದ್ದರು. ಬಾಂಬ್ ಬೆದರಿಕೆ ಕಳುಹಿಸಿದ ಇ ಮೈಲ್ ಸಂದೇಶದ ಜಾಡು ಹಿಡಿದು ಪೊಲೀಸರು ನಡೆಸಿದ ತನಿಖೆಯಲ್ಲಿ ಇದನ್ನು ಕಳುಹಿಸಿದ ಆರೋಪಿಯನ್ನು ಗುರುತಿಸಿ ಆತನನ್ನು ಸೆರೆಹಿಡಿಯುವಲ್ಲಿ ಪೊಲೀಸರು ಕೊನೆಗೂ ಸಫಲರಾಗಿದ್ದಾರೆ. ವಿದೇಶಕ್ಕೆ ಹೋಗಲು ನನಗೆ ಆಸಕ್ತಿ ಇರಲಿಲ್ಲ. ಅದರಿಂದಾಗಿ ನಾನು ಪ್ರಯಾಣಿಸಬೇಕಾಗಿದ್ದ ವಿಮಾನಕ್ಕೆ ನಾನು ಬಾಂಬ್ ಬೆದರಿಕೆಯೊಡ್ಡಿದ್ದನೆಂದು ಆರೋಪಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾನೆ. ಬಂಧಿ ತನನ್ನು ಬಳಿಕ ನ್ಯಾಯಾಲಯದ ನಿ ರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.