ಕಳಮಶ್ಶೇರಿ ಸರಣಿ ಬಾಂಬ್ ಸ್ಫೋಟ: ಮೃತರ ಸಂಖ್ಯೆ ೩ಕ್ಕೇರಿಕೆ: ೧೮ ಮಂದಿ ಚಿಂತಾಜನಕ
ಕೊಚ್ಚಿ: ಕಳಮಶ್ಶೇರಿಯ ಯಾಹೋಮಯನ ವಲಯ ಸಮಾವೇಶದ ವೇಳ ಸಂಭವಿಸಿದ ಸರಣಿ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ ಈಗ ೩ಕ್ಕೇರಿದೆ. ಈ ಸ್ಫೋಟದಲ್ಲಿ ಕನಿಷ್ಠ ೫೨ ಮಂದಿ ಗಾಯಗೊಂಡಿದ್ದು, ಅವರಲ್ಲಿ ೧೨ಮಂದಿಯ ಸ್ಥಿತಿ ಅತ್ಯಂತ ಚಿಂತಾಜನಕವಾಗಿದೆಯೆಂದು ವೈದ್ಯರು ತಿಳಿಸಿದ್ದಾರೆ.
ಸಾವನ್ನಪ್ಪಿದವರಲ್ಲಿ ೧೨ ವರ್ಷದ ಬಾಲಕಿಯೂ ಒಳಗೊಂಡಿದ್ದಾಳೆ. ತೊಡುಪುಳ ಕಾಳಿಯಾರ್ಕುಳದ ದಿ. ಪುಷ್ಪನ್ ಎಂಬವರ ಪತ್ನಿ ಕುಮಾರಿ (೫೩) ಸ್ಫೋಟ ನಡೆದ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಚಿಕಿತ್ಸೆಯಲ್ಲಿದ್ದ ಪೆರುಂಬಾವೂರು ಉರಿಜಾಲ್ ವಾಟ್ಟೋಳಿಪ್ಪಾಡಿ ಪುಳಿಕ್ಕಲ್ ವೀಟಿಲ್ ಲಿಯೋನಾ ಪೌಲೋಸ್ (೫೫) ಎಂಬವರು ನಿನ್ನೆ ರಾತ್ರಿ ಮೃತಪಟ್ಟರು. ಆ ಬಳಿಕ ಮಲಯಟ್ಟೂರ್ ಕಡುವನ್ಕುಳ ವೀಟಿಲ್ ಲಿಬೀನಾ (೧೨) ಎಂಬ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಪ್ರಾಣ ಕಳೆದುಕೊಂಡಿದ್ದಾಳೆ.
ಕಳಮಶ್ಶೇರಿಯ ಸಾಮ್ರಾ ಕನ್ವೆನ್ಶನ್ ಸೆಂಟರ್ನಲ್ಲಿ ನಿನ್ನೆ ಬೆಳಿಗ್ಗೆ ೯.೪೦ಕ್ಕೆ ಇಡೀ ದೇಶವನ್ನೇ ನಡುಗಿಸಿದ ಈ ಭೀಕರ ಸರಣಿ ಬಾಂಬ್ ಸ್ಫೋಟ ನಡೆದಿದ್ದು, ಆ ವೇಳೆ ಆ ಹಾಲ್ನಲ್ಲಿ ಸಹನೆಯ ಕುರಿತಾದ ತರಬೇತಿ ನೀಡಲು ಮೂರು ದಿನಗಳ ಅಂತಾರಾಷ್ಟ್ರೀಯ ವಿಚಾರಣೆ ಸಂಕೀರ್ಣ ಸಮ್ಮೇಳನ ನಡೆಯುತ್ತಿತ್ತು. ಅದರಲ್ಲಿ ಮಹಿಳೆಯರು ಸೇರಿದಂತೆ ಇತರ ೨೪೦೦ ಮಂದಿ ಭಾಗವಹಿಸಿದ್ದರು.
ಬಾಂಬ್ ಸ್ಫೋಟ ಉಂಟಾದ ವೇಳೆ ಸಭಾಂಗಣದಲ್ಲಿದ್ದವರಲ್ಲಿ ಪ್ರಾರ್ಥನೆಯಲ್ಲಿ ನಿರತರಾಗಿದ್ದರು. ಯಹೋವನಗಳೆಂದರೆ ಕ್ರೈಸ್ತ ಧರ್ಮದ ಒಂದು ಒಳಪಂಗಡದವರಾಗಿದ್ದಾರೆ. ಇವರು ಭಾಗವಹಿಸಿದ್ದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಟಿಫಿನ್ ಬಾಕ್ಸ್ನಲ್ಲಿ ಇಡಲಾಗಿದ್ದ ರಿಮೋಟ್ ನಿಯಂತ್ರಿತ ಮೂರು ಬಾಂಬ್ಗಳನ್ನಿರಿಸಿ ನಿಮಿಷಗಳೊಳಗೆ ಅದನ್ನು ಸ್ಫೋಟಿಸಲಾಗಿದೆ.