ಕಳಾಯಿಯ ಕೃಷಿಕನ ಮನೆಯಿಂದ ನಗ-ನಗದು ಕಳವುಗೈದ ಕೆಲಸದಾಳು ಸೆರೆ
ಉಪ್ಪಳ: ಪೈವಳಿಕೆ ಬಳಿಯ ಕಳಾಯಿಯಲ್ಲಿ ಕೃಷಿಕನ ಮನೆಯಿಂದ ಏಳು ಪವನ್ ಚಿನ್ನಾಭರಣ ಹಾಗೂ ಒಂದು ಲಕ್ಷರೂಪಾಯಿ ಕಳವುಗೈದು ಪರಾರಿಯಾದ ಮನೆ ಕೆಲಸದಾಳು ಸೆರೆಯಾಗಿದ್ದಾನೆ.
ಮೈಸೂರು ಎಲ್ವಾಳ ನಿವಾಸಿ ಯಶವಂತ್ ಕುಮಾರ್ (38) ಎಂಬಾ ತನನ್ನು ಮಂಜೇಶ್ವರ ಪೊಲೀಸರು ಸೆರೆ ಹಿಡಿದಿದ್ದಾರೆ. ಕಳಾಯಿಯ ಸಂಜೀವ ಶೆಟ್ಟಿಯವರ ಮನೆಯಿಂದ ಚಿನ್ನಾಭರಣ ಹಾಗೂ ಹಣ ಕಳವಿಗೀಡಾದ ಬಗ್ಗೆ ಬೆಂಗಳೂರಿನಲ್ಲಿರುವ ಪುತ್ರ ಅಶೋಕ್ ಕುಮಾರ್ ಇತ್ತೀಚೆಗೆ ಮನೆಗೆ ಬಂದಾಗ ಗಮನಕ್ಕೆ ಬಂದಿತ್ತು. ಕಪಾಟಿನಲ್ಲಿರಿಸಿದ್ದ ನಾಲ್ಕು ಚಿನ್ನದ ಬಳೆಗಳನ್ನು ತೆಗೆದು ಅದೇ ರೀತಿಯ ನಕಲಿ ಚಿನ್ನದ ಬಳೆಗ ನ್ನು ಇರಿಸಿ ಮನೆ ಕೆಲಸದಾಳುವಾದ ಯಶವಂತ್ ಕುಮಾರ್ ಪರಾರಿಯಾಗಿ ದ್ದನು. ಕಳೆದ ಹತ್ತು ತಿಂಗಳಿಂದ ಸಂಜೀವ ಶೆಟ್ಟಿಯವರ ಮನೆಯಲ್ಲ್ಲಿ ಯಶವಂತ್ ಕುಮಾರ್ ಕೆಲಸಕ್ಕಿದ್ದನು. ಸಂಜೀವ ಶೆಟ್ಟಿಯವರ ಆರೋಗ್ಯ ಕುರಿತು ಗಮನ ಹರಿಸಲು ಈತನನ್ನು ನೇಮಿಸಲಾಗಿತ್ತು. ಈ ಮಧ್ಯೆ ಜನವರಿ ೨೮ರಂದು ಈತ ತಿಳಿಸದೆ ಊರಿಗೆ ಹೋಗಿದ್ದನು. ಈ ಬಗ್ಗೆ ತಿಳಿದ ಅಶೋಕ್ ಕುಮಾರ್ ಶೆಟ್ಟಿ ಬೆಂಗಳೂರಿನಿಂದ ಮನೆಗೆ ತಲುಪಿದ್ದರು. ಬಳಿಕ ಕೊಠಡಿಯಲ್ಲಿದ್ದ ಕಪಾಟು ತೆರೆದು ಪರಿಶೀಲಿಸಿದಾಗ ಒಂದು ಲಕ್ಷ ರೂ. ಕಳವಿಗೀಡಾದ ಬಗ್ಗೆ ತಿಳಿದುಬಂದಿತ್ತು. ಆದರೆ ನಾಲ್ಕು ಬಳೆಗಳು ಅಲ್ಲಿಯೇ ಇದ್ದವು. ಚಿನ್ನದ ಬಣ್ಣದಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಪರಿಶೀಲಿ ಸಿದಾಗ ಅವು ನಕಲಿ ಚಿನ್ನವೆಂದು ತಿಳಿದು ಬಂದಿದೆ. ಈ ಕುರಿತು ಅಶೋಕ್ ಕುಮರ್ ಎರಡು ದಿನಗಳ ಹಿಂದೆ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಪೊಲೀಸರು ನಡೆಸಿದ ತನಿಖೆಯಲ್ಲಿ ಹಣ ಹಾಗೂ ಚಿನ್ನಾಭರಣ ಕಳವು ನಡೆದಿರುವುದು ಹಾಗೂ ಚಿನ್ನದ ಬಳೆಗಳ ಬದಲಿಗೆ ನಕಲಿ ಚಿನ್ನವನ್ನು ಕಪಾಟಿನಲ್ಲಿರಿಸಿರುವುದು ಮನೆಕೆಲಸ ದಾಳುವೆಂದು ಖಚಿತಪಡಿಸಲಾಗಿತ್ತು.
ಚಿನ್ನಾಭರಣಗಳನ್ನು ಕಳವುಗೈದು ಪರಾರಿಯಾದ ಯಶವಂತ್ ಕುಮಾರ್ ಮೈಸೂರಿನಲ್ಲಿ ಆಡಂಬರ ಜೀವನ ನಡೆಸುತ್ತಿದ್ದನು. ಆತನನ್ನು ಉಪಾಯ ದಿಂದ ಬಲೆಗೆ ಹಾಕಿಕೊಂಡ ಪೊಲೀ ಸರು ಬ್ಯಾಂಕ್ ಖಾತೆಗಳನ್ನು ಪರಿಶೀ ಲಿಸಿದಾಗ ಹಲವು ಬಾರಿ ವ್ಯವಹಾರ ನಡೆದ ಬಗ್ಗೆ ತಿಳಿದುಬಂದಿದೆ. ಅನಂ ತರ ಆತನ ಮೊಬೈಲ್ ಫೋನ್ ಪರಿಶೀಲಿಸಿದಾಗ ರೋಲ್ಡ್ ಗೋಲ್ಡ್ ಬಳೆಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಿರುವುದು ತಿಳಿದುಬಂದಿದೆ. ಬಳಿಕ ಆರೋಪಿ ಯನ್ನು ತನಿಖೆಗೊಳ ಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ.
ಕಾಸರಗೋಡು ಡಿವೈಎಸ್ಪಿ ಸಿ.ಕೆ. ಸುನಿಲ್ ಕುಮಾರ್ ನೇತೃತ್ವದಲ್ಲಿ ಮಂಜೇಶ್ವರ ಎಸ್ ಐ ರತೀಶ್‌ಗೋಪಿ, ಎಎಸ್‌ಐ ಅತುಲ್‌ರಾಮ್, ಎಸ್‌ಸಿಪಿಒ ಅಬ್ದುಲ್ ಶುಕೂರ್, ಅಬ್ದುಲ್ ಸಲಾಂ ಎಂಬಿವರು ಒಳಗೊಂಡ ತಂಡ ಆರೋಪಿಯನ್ನು ಸಾಹಸಿಕವಾಗಿ ಸೆರೆಹಿಡಿದಿದೆ.