ಕಾಂಗ್ರೆಸ್‌ನೊಂದಿಗೆ ಭಿನ್ನಮತದ ಬೆನ್ನಲ್ಲೇ ಬಿಜೆಪಿ ನೇತಾರನೊಂದಿಗೆ ಸೆಲ್ಫಿ ಕ್ಲಿಕ್ಕಿಸಿದ ಶಶಿ ತರೂರ್; ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿ
ತಿರುವನಂತಪುರ: ಕೈಗಾರಿಕಾ ವಲಯದಲ್ಲಿ ಎಡರಂಗ ಸರಕಾರದ ಮಹತ್ತರ ಸಾಧನೆಗಳನ್ನು ಹೊಗಳಿದ ಕಾಂಗ್ರೆಸ್ ನೇತಾರ ಹಾಗೂ ತಿರುವನಂತಪುರ ಸಂಸದ ಶಶಿ ತರೂರ್‌ರ ವಿರುದ್ಧ ಕಾಂಗ್ರೆಸ್ ನಾಯಕರು ತಿರುಗಿ ಬಿದ್ದ ಬೆನ್ನಲ್ಲೇ ಅದು ಕಾಂಗ್ರೆಸ್‌ನ ಕೇರಳ ಘಟಕದಲ್ಲಿ ಭಾರೀ ಭಿನ್ನಮತ ತಲೆಯೆತ್ತುವಂತೆ ಮಾಡಿದೆ. ಇದೇ ಸಂದರ್ಭದಲ್ಲಿ ಶಶಿ ತರೂರ್ ಇನ್ನೊಂದೆಡೆ ಬಿಜೆಪಿ ನೇತಾರ ಹಾಗೂ ಕೇಂದ್ರ ಸಚಿವರೂ ಆಗಿರುವ ಪೀಯೂಶ್ ಗೋಯಲ್‌ರೊಂದಿಗೆ ಸೆಲ್ಫಿ ತೆಗೆದು ಅದನ್ನು ಪ್ರಚಾರಮಾಡಿದ್ದು ಅದು ಇನ್ನೊಂದೆಡೆ ಕೇರಳ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸುವಂತೆ ಮಾಡಿದೆ. ಎಡರಂಗ ಸರಕಾರವನ್ನು ಹೊಗಳಿದ ಶಶಿ ತರೂರ್ ವಿರುದ್ಧ ಕಾಂಗ್ರೆಸ್‌ನ ಕೇರಳ ಘಟಕ ನಾಯಕರು ಮುಗಿಬಿದ್ದ ಬೆನ್ನಲ್ಲೇ ಕೇರಳ ರಾಜ್ಯದ ನಾಯಕತ್ವದಲ್ಲಿ ಗೊಂದಲ ಇದೆ. ಕಾಂಗ್ರೆಸ್ ತನಗೆ ಯಾವುದೇ ಜವಾಬ್ದಾರಿ ನೀಡುತ್ತಿಲ್ಲ. ನೀಡಿದಲ್ಲಿ ಮಾತ್ರವೇ ನಾನು ಪಕ್ಷದ ಪಾಲಗರುತ್ತೇನೆ. ಇಲ್ಲವಾದಲ್ಲಿ ನನಗೆ ಬೇರೆ ದಾರಿ ಇದೆಯೆಂದು ಶಶಿ ತರೂರ್ ಅದಕ್ಕೆ ಪ್ರತ್ಯುತ್ತರ ನೀಡಿದ್ದರು. ಇದು ಕಾಂಗ್ರೆಸ್‌ನ ರಾಜ್ಯ ರಾಜಕೀಯದಲ್ಲಿ ಭಾರೀ ಬಿರುಕು ಉಂಟುಮಾಡುವ ಸ್ಥಿತಿ ಸೃಷ್ಟಿಯಾಗುವಂತೆ ಮಾಡಿದೆ. ಎಡರಂಗದ ಕೈಗಾರಿಕಾ ಸಾಧನೆಗಳನ್ನು ಹೊಗಳಿದ ಶಶಿ ತರೂರ್‌ಗೆ ಇನ್ನೊಂದೆಡೆ ಸಿಪಿಎಂ ಕೂಡಾ ಬೆಂಬಲಕ್ಕೆ ನಿಂತಿದ್ದು, ಅದು ಭಾರೀ ಚರ್ಚೆಗೆ ಗ್ರಾಸಮಾಡಿಕೊಟ್ಟಿದೆ. ಈ ವೇಳೆಯಲ್ಲೇ ಶಶಿ ತರೂರ್ ಬಿಜೆಪಿ ನೇತಾರ, ಕೇಂದ್ರ ಸಚಿವ ಪೀಯೂಶ್ ಗೋಯಲ್‌ರ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಅದು ಅವರು ಬಿಜೆಪಿಯೊಂದಿಗೆ ನಿಕಟವಾಗುತ್ತಿ ದ್ದಾರೆಂಬ ಮಾತುಗಳು ಕೇಳಿಬರುವಂತೆ ಮಾಡಿದೆ. ಇಂತಹ ಬೆಳವಣಿಗೆಗಳು ಕೇರಳ ರಾಜಕೀಯದಲ್ಲಿ ಹೊಸ ಬೆಳವಣಿಗೆಗೆ ದಾರಿಮಾಡಿಕೊಟ್ಟಿದೆ.