ಕಾಂಗ್ರೆಸ್ ಮಂಡಲ ಸಮಿತಿ ಕಚೇರಿ ಉದ್ಘಾಟನೆ, ಅಧ್ಯಕ್ಷರ ಪದಗ್ರಹಣ
ಮಂಜೇಶ್ವರ: ಮಂಜೇಶ್ವರ ಮಂಡಲ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಹನೀಫ್ ಪಡಿಞ್ಞಾರ್ ಅಧಿಕಾರ ಸ್ವೀಕರಿಸಿದರು. ಇದೇ ವೇಳೆ ನೂತನ ಕಚೇರಿ ಉದ್ಘಾಟನೆ ನಡೆಯಿತು. ಡಿಸಿಸಿ ಜಿಲ್ಲಾ ಅಧಕ್ಷ ಪಿ.ಕೆ. ಫೈಸಲ್ ಉದ್ಘಾಟಿಸಿದರು. ಉಮ್ಮರ್ ಶಾಫಿ ಅಧ್ಯಕ್ಷತೆ ವಹಿಸಿದರು.
ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿಎಂಕೆ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಜೆ.ಎಸ್, ನೇತಾರರಾದ ಜವಾದ್ ಪುತ್ತೂರು, ಸತ್ಯನ್ ಸಿ ಉಪ್ಪಳ, ಮನ್ಸೂರ್ ಬಿ.ಎಂ, ನಾಗೇಶ್ ಮಂಜೇಶ್ವರ, ಓಂ ಕೃಷ್ಣ, ಇರ್ಷಾದ್ ಮಂಜೇಶ್ವರ, ರಂಜಿತ್ ಮಂಜೇಶ್ವರ, ಮುಸ್ತಫಾ, ಮುಹಮ್ಮದ್ ಮಲಂದೂರು, ರಶೀದ್, ಹರೀಶ್, ಶಶಿಕಲ, ಜೆಸ್ಸಿ ಕಣ್ವತೀರ್ಥ, ಪ್ರಶಾಂತಿ ಮಂಜೇಶ್ವರ, ವಿ.ವಿ. ರಾಮನ್, ಫಾರೂಕ್ ಸಣ್ಣಡ್ಕ, ಹನೀಫ್ ಸಣ್ಣಡ್ಕ, ಮಾಲಿಂಗ, ರಾಮನ್ ಚಕ್ಕಿಗುಡ್ಡೆ ಉಪಸ್ಥಿತರಿದ್ದರು.