ಕಾಡಾನೆ ದಾಳಿಯ ಬೆನ್ನಲ್ಲೇ ಹುಲಿ ಪ್ರತ್ಯಕ್ಷ : ಜನತೆ ಆತಂಕದಲ್ಲಿ

ಕಾಸರಗೋಡು: ಮುಳಿಯಾರು, ಬೇಡಡ್ಕ ಪಂಚಾಯತ್‌ಗಳ ವಿವಿಧ ಭಾಗಗಳಲ್ಲಿ ಕಾಡಾನೆಯ ದಾಳಿ ತಡೆಯಲು ಸಾಧ್ಯವಾಗದೆ ಅರಣ್ಯ ಇಲಾಖೆ ಅಧಿಕಾರಿಗಳು  ಸಂದಿಗ್ಧತೆಯಲ್ಲಿರುವಾಗಲೇ ಪಡ್ಪುನಲ್ಲಿ ಹುಲಿ ಕಂಡುಬಂದಿರುವುದಾಗಿ ಹೇಳಲಾಗುತ್ತಿದೆ. ಈ ಬಗ್ಗೆ ವ್ಯಾಪಕ ಪ್ರಚಾರ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ತನಿಖೆ  ತೀವ್ರಗೊಳಿಸಿದ್ದಾರೆ. ಪಡ್ಪು , ಬಂಡಂಕೈ ಪ್ರದೇಶಗಳಲ್ಲಿ ನಿನ್ನೆ ರಾತ್ರಿ ಹುಲಿ ಕಂಡುಬಂದಿರುವುದಾಗಿ ಹೇಳಲಾಗುತ್ತಿದೆ. ರಸ್ತೆಗೆ ಅಡ್ಡವಾಗಿ ಹುಲಿಯೊಂದು ಓಡುತ್ತಿರುವುದನ್ನು  ಆಟೋ ಚಾಲಕನೋರ್ವ ಕಂಡಿರುವುದಾಗಿ ಹೇಳಲಾಗುತ್ತಿದೆ.  ಹುಲಿ ಓಡುತ್ತಿರುವ ದೃಶ್ಯ ಸಾಮಾಜಿಕ ತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಇದು ಜನರಲ್ಲಿ ಆತಂಕ ಹೆಚ್ಚಿಸಿದೆ.. ಆದರೆ ಹುಲಿ ಈ ಭಾಗಕ್ಕೆ ಬರುವ ಸಾಧ್ಯತೆ ಇಲ್ಲವೆಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಕಾಸರಗೋಡು ಜಿಲ್ಲೆಯ ಅರಣ್ಯದಲ್ಲಿ ಇದುವರೆಗೆ ಹುಲಿ ಪತ್ತೆಯಾದ ಬಗ್ಗೆ ವರದಿಯಾಗಿಲ್ಲ. ಆದ್ದರಿಂದ  ಹುಲಿ ಕಂಡುಬಂದಿದೆಯೆಂಬ  ಪ್ರಚಾರವನ್ನು ಒಪ್ಪಲು ಕಷ್ಟಸಾಧ್ಯ ಎಂದು ಅಧಿಕಾರಿಗಳು ತಿಳಿಸುತ್ತಿದ್ದಾರೆ. 

You cannot copy contents of this page