ಕಾಡಾನೆ ದಾಳಿ ವ್ಯಾಪಕ ಕೃಷಿ ನಾಶ

ಬೋವಿಕ್ಕಾನ: ಕಾನತ್ತೂರು ಸಮೀಪ ಬೀಟಿಯಡ್ಕ ಕಾರಿಪ್ಪಳ್ಳದಲ್ಲಿ ಇಂದು ಮುಂಜಾನೆ ಕಾಡಾನೆ ದಾಳಿಯಿಂದ ವ್ಯಾಪಕ ಕೃಷಿನಾಶ ಉಂಟಾಗಿದೆ. ಇಲ್ಲಿನ ಪ್ರಶಾಂತ್ ಕಾನತ್ತೂರು, ರಾಜನ್, ಶಶಿ, ಪಿ.ಕೆ. ನಾರಾಯಣನ್ ಎಂಬಿವರ ತೋಟಗಳಿಗೆ ಕಾಡಾನೆ  ನುಗ್ಗಿದೆ. ಇಂದು ಮುಂಜಾನೆ ೨ ಗಂಟೆ ವೇಳೆ ಆನೆ ಕೃಷಿ ಸ್ಥಳಗಳಿಗೆ ದಾಳಿ ನಡೆಸಿರುವುದಾಗಿ  ದೂರಲಾಗಿದೆ.

ಕಳೆದ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ಕಾಡಾನೆ ಹಾವಳಿ ವ್ಯಾಪಕಗೊಂಡಿರುವುದಾಗಿ ಹೇಳಲಾಗುತ್ತಿದೆ. ಈ ಹಿಂದೆಯೂ ಈ ಪ್ರದೇಶದಲ್ಲಿ ಕಾಡಾನೆ ಹಾವಳಿಯಿಂದ ಭಾರೀ ಪ್ರಮಾಣದಲ್ಲಿ ಕೃಷಿ ನಾಶ ಉಂಟಾಗಿತ್ತು.

Leave a Reply

Your email address will not be published. Required fields are marked *

You cannot copy content of this page